ಕುತೂಹಲ ಮೂಡಿಸಿದ ದುನಿಯಾ ವಿಜಯ್ ಹೊಸ ಚಿತ್ರದ ಪೋಸ್ಟರ್

ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿದ್ದ ಸಲಗ ಸಿನಿಮಾ ಕಳೆದ ವರ್ಷ ಕೊವೀಡ್ ಹಾಗೂ ಲಾಕ್ಡೌನ್ ಸಂದರ್ಭದಲ್ಲಿಯೂ ಭರ್ಜರಿ ಯಶಸ್ಸು ಘಳಿಸಿತ್ತು. ಥಿಯೇಟರ್ನಲ್ಲಿ ಸಲಗ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡು ಗಲ್ಲಪೆಟ್ಟಿಗೆ ಭರ್ತಿ ಮಾಡಿತ್ತು. ನಿರ್ದೇಶಕರಾಗಿ ಸಕ್ಸಸ್ ಆದ ದುನಿಯಾ ವಿಜಯ್ ಇದೀಗ ಇನ್ನೊಂದು ಸಿನಿಮಾ ಘೋಷಿಸಿದ್ದು ಚಿತ್ರದ ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ದುನಿಯಾ ವಿಜಯ್ ಹೊಸ ಸಿನಿಮಾದ ಫೋಸ್ಟರ್ ರಿಲೀಸ್ ಮಾಡಿದ್ದಾರೆ. ಇದು ವಿಜಯ್ ನಟನೆಯ 28ನೇ ಸಿನಿಮಾವಾಗಿದ್ದು ಚಿತ್ರಕ್ಕೆ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಬಂಡವಾಳ ಹೂಡ್ತಿದ್ದಾರೆ. ಪೋಸ್ಟರ್ನಲ್ಲಿ ಬೈಕ್ ಓಡಿಸುತ್ತಿರುವ ಕೈ ಹಾಗೂ ಯಮಹಾ ಆರ್ಎಕ್ಸ್ 100 ಬೈಕ್ ತೋರಿಸಲಾಗಿದೆ. ಪೋಸ್ಟರ್ನಲ್ಲಿರುವ ಕೈ ರಕ್ತ ಸಿಕ್ತವಾಗಿದ್ದು ಇದು ಕೂಡ ರೌಡಸಂ ಕಥೆ ಎಂಬುದು ಸ್ಪಷ್ಟವಾಗಿದೆ.
ಶಿವರಾತ್ರಿಯ ಸಂದರ್ಭದಲ್ಲಿ ದುನಿಯಾ ವಿಜಯ್ರ ಹೊಸ ಸಿನಿಮಾ ಅನೌನ್ಸ್ ಆಗಲಿದೆ ಅನ್ನೋ ಮಾತು ಕೇಳಿ ಬರ್ತಿದೆ. ಮುಂದಿನ ಸಿನಿಮಾವನ್ನ ವಿಜಯ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲು ತೀರ್ಮಾನ ಮಾಡಿದ್ದಾರೆ ಎನ್ನಲಾಗ್ತಿದೆ. ಯುವ ಜನಾಂಗದ ಸಮಸ್ಯೆ. ಕುಟುಂಬದಲ್ಲಿ ಉಂಟಾಗುವ ತೊಡಕುಗಳನ್ನ ಇಟ್ಟುಕೊಂಡು ಸಿನಿಮಾದ ಕಥೆ ರೆಡಿಮಾಡಿದ್ದು, ಮಾಸ್ತಿ ಸಂಭಾಷಣೆ ಬರೆಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ.




