ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಕಣ್ಮುಂಬಿಕೊಂಡ ಸೆಲೆಬ್ರಿಟಿಗಳು: ಪ್ರೀಮಿಯರ್ ಶೋಗೆ ಆಗಮಿಸದ ರಣಬೀರ್ ಕಪೂರ್

ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಇಂದು (ಫೆ.25)ರಂದು ರಿಲೀಸ್ ಆಗಿದ್ದು ಸಿನಿಮಾ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಬಾಲಿವುಡ್ ಸೆಲೆಬ್ರಿಟಿಗಳು ಎರಡು ದಿನ ಮೊದಲೇ ಚಿತ್ರವನ್ನ ಕಣ್ಮುಂಬಿಕೊಂಡಿದ್ದು ಬನ್ಸಾಲಿ ನಿರ್ದೇಶನ ಹಾಗೂ ಆಲಿಯಾ ನಟನೆಯನ್ನ ಮೆಚ್ಚಿಕೊಂಡಿದ್ದಾರೆ.
ಬಾಲಿವುಡ್ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿ ವಿವಾದ ಹುಟ್ಟಿಸಿದ್ದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಇಂದು ಅದ್ದೂರಿಯಾಗಿ ತೆರೆಗೆ ಬಂದಿದೆ. ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸಾಕಷ್ಟು ಕುತೂಹಲ ಕ್ರಿಯೇಟ್ ಮಾಡಿದ್ದ ಸಿನಿಮಾ ಥಿಯೇಟರ್ನಲ್ಲೂ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಚಿತ್ರ ಬಿಡುಗಡೆಗೆ ಎರಡು ದಿನ ಮೊದಲೇ ಚಿತ್ರತಂಡ ಸೆಲೆಬ್ರಿಟಿ ಶೋ ಆಯೋಜಿಸಿತ್ತು. ಚಿತ್ರ ನೋಡಿದ ಬಿಟೌನ್ ಸೆಲೆಬ್ರಿಟಿಗಳು ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಬಾಲಿವುಡ್ ಕಲಾವಿದರಾದ ರಿತೇಶ್ ದೇಶ್ಮುಖ್, ವಿಕ್ಕಿ ಕೌಶಲ್, ಶಶಾಂತ್ ಕೈತಾನ್, ರಿದ್ಧಿಮಾ ಕಪೂರ್ ಸೇರಿದಂತೆ ಸಾಕಷ್ಟು ಮಂದಿ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರ ನೋಡಿದ ಪ್ರತಿಯೊಬ್ಬರು ಆಲಿಯಾ ನಟನೆಯನ್ನ ಕೊಂಡಾಡಿದ್ದಾರೆ. ಚಿತ್ರ ವೀಕ್ಷಿಸಿದ ನಟ ವಿಕ್ಕಿ ಕೌಶಲ್ ‘ಈ ಸಿನಿನಮಾವನ್ನ ಕಟ್ಟಿಕೊಡುವಲ್ಲಿ ತೋರಿದ ಬುದ್ಧಿವಂತಿಕೆ ಕಂಡು ನಾನು ಬೆರಗಾದೆ. ಸಂಜಯ್ ಲೀಲಾ ಬನ್ಸಾಲಿ ಸರ್, ನೀವು ಮಾಸ್ಟರ್. ಆಲಿಯಾ ಭಟ್ ಬಗ್ಗೆ ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಗಂಗೂಬಾಯಿ ಪಾತ್ರದಲ್ಲಿ ಆಲಿಯಾ ನಟನೆ ಅಮೇಜಿಂಗ್. ನಿಮಗೆ ಹ್ಯಾಟ್ಸ್ಆಫ್. ದೊಡ್ಡ ಪರದೆಯ ಮ್ಯಾಜಿಕ್ ಇದು. ಈ ಸಿನಿಮಾವನ್ನ ಯಾರು ಮಿಸ್ ಮಾಡಿಕೊಳ್ಳಬೇಡಿ ಎಂದಿದ್ದಾರೆ ವಿಕ್ಕಿ ಕೌಶಲ್.
ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ವಿಶೇಷ ಪ್ರದರ್ಶನಕ್ಕೆ ಆಲಿಯಾ ಭಟ್ ಪ್ರಿಯಕರ್ ರಣಬೀರ್ ಕಪೂರ್ ಬಂದಿರಲಿಲ್ಲ. ಬದಲಾಗಿ ರಣಬೀರ್ ಸಹೋದರಿ ರಿದ್ಧಿಮಾ ಕಪೂರ್ ಸಿನಿಮಾ ವೀಕ್ಷಿಸಿದ್ದು, ‘ಆಲಿಯಾ ಭಟ್ ಹಾಗೂ ಸಂಜಯ್ ಲೀಲಾ ಬನ್ಸಾಲಿ ಇಬ್ಬರು ಲೆಜೆಂಡ್ಗಳು. ಅವರಿಬ್ಬರು ಜೊತೆಯಾಗಿ ಈ ಮ್ಯಾಜಿಕ್ ಅನ್ನು ಕಟ್ಟಿಕೊಟ್ಟಿದ್ದಾರೆ. ಎಂಥಾ ಫೆಂಟಾಸ್ಟಿಕ್ ಸಿನಿಮಾ. ಆಲಿಯಾ ನಟನೆಯ ಅತ್ಯುತ್ತಮವಾಗಿದೆ ಎಂದಿದ್ದಾರೆ.



