Breaking NewsLatestಮೆಟ್ರೋರಾಜ್ಯಸುದ್ದಿ

Budget: ಮಾರ್ಚ್​ 4 ರಂದು ಚೊಚ್ಚಲ ಬಜೆಟ್ ಮಂಡಿಸಲಿರುವ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯ ಮುಂಗಡ ಅಧಿವೇಶನ ಮಾರ್ಚ್ 4 ರಿಂದ 30 ರ ವರೆಗೆ ನಡೆಯಲಿದ್ದು, ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ 4 ರಂದು ಮಧ್ಯಾಹ್ನ 12.30 ಕ್ಕೆ 2022-23 ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ.

ಒಟ್ಟು 17 ದಿನಗಳ ಸದನದ ಕಾಲ ಕಲಾಪ ನಡೆಯಲಿದ್ದು ಬಜೆಟ್ ಮೇಲಿನ ಚರ್ಚೆ, ವಿಧೇಯಕಗಳ ಮಂಡನೆ ಸೇರಿದಂತೆ ಹಲವು ವಿಷಯಗಳು ಚರ್ಚೆಗ ಬರಲಿವೆ. ಮಾರ್ಚ್ 4 ರಿಂದ 30 ರ ವರೆಗೆ ತಾತ್ಕಾಲಿಕ ಕಲಾಪ‌ಪಟ್ಟಿ ಪ್ರಕಟಿಸಲಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್​ ಮಂಡನೆಯ ಬಳಿಕ ಕಲಾಪವನ್ನು ಮತ್ತೆ ಮಾರ್ಚ್ 7ಕ್ಕೆ ಮುಂದೂಡಿಕೆಯಾಗಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button