ಬೇಸಿಗೆಯಲ್ಲಿ ದೇಹ ತಂಪಿರಲು ಹೀಗೆ ಮಾಡಿ

ಇನ್ನೇನು ಬೇಸಿಗೆ ಕಾಲ ಬಂದಿದೆ. ಹೊರಗಡೆ ತುಂಬ ಬಿಸಿಲು ಇರುತ್ತೆ. ಆ ಸಮಯದಲ್ಲಿ ಪ್ರತಿಯೊಬ್ಬರಿಗೂ ಕೂಲ್ ಆಗಿರೋ ತರಹ ಏನಾದ್ರೂ ಕುಡಿಬೇಕು ಅನಿಸುತ್ತೆ. ಕೆಲವರು ಜ್ಯೂಸ್ ಮೊರೆ ಹೋಗುತ್ತಾರೆ. ಈ ಬಿಸಿಲಿನ ಸಮಯದಲ್ಲಿ ನಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಇಲ್ಲಿದೆ ಕೆಲ ಟಿಪ್ಸ್ ಗಳಿವೆ.
ಟೊಮ್ಯಾಟೋ: ಟೊಮ್ಯಾಟೋದಲ್ಲಿ ವಿಟಮಿನ್ ಸಿ, ಕೆ1 ಮತ್ತು ಬಿ9 ಸಮೃದ್ಧವಾಗಿದೆ. ಇವು ಆ್ಯಂಟಿ ಆಕ್ಸಿಡೆಂಟ್ ಗಳಾಗಿ ಕಾರ್ಯನಿರ್ವಹಿಸುತ್ತವೆ. ಇದರಲ್ಲಿ 95% ನೀರು ಹಾಗೂ ನಾರಿನಂಶ ಅಧಿಕವಾಗಿರುತ್ತದೆ.
ಬದನೆಕಾಯಿ: ಬದನೆಯಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ ಮತ್ತು ನಾರಿನಂಶ ಹೇರಳವಾಗಿದ್ದು, ಸೋಂಕು ತಡೆಯಲು ನೆರವಾಗುತ್ತದೆ.
ಹಾಗಲಕಾಯಿ: ಬೇಸಿಗೆಯಲ್ಲಿ ಚರ್ಮದ ಮೇಲೆ ಗುಳ್ಳೆಗಳು, ಸೋರಿಯಾಸಿಸ್ ಇತ್ಯಾದಿಗೆ ಹಾಗಾಲಕಾಯಿ ಬೆಸ್ಟ್ ಮನೆ ಮದ್ದು.
ನೆಲ್ಲಿಕಾಯಿ: ಇದು ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ನೆಲ್ಲಿಕಾಯಿ ವಿಟಮಿನ್ ಸಿ, ಖನಿಜಗಳು ಮತ್ತು ಫೈಬರ್ ಅನ್ನು ಹೊಂದಿದ್ದು, ದೇಹ ಬಲಪಡಿಸುವ ಶಕ್ತಿಯನ್ನು ನೀಡುತ್ತದೆ.
ಸೌತೆಕಾಯಿ: ಸೌತೆಕಾಯಿಯಲ್ಲಿ ನೀರಿನಂಶ ಅಧಿಕವಾಗಿದೆ. ಇದು ದೇಹಕ್ಕೆ ಜಲಸಂಚಯನವನ್ನು ಒದಗಿಸುವುದರ ಜೊತೆಗೆ ಬೇಸಿಗೆಯಲ್ಲಿ ಹೆಚ್ಚಾಗಿ ಉಂಟಾಗುವ ಜಠರಗರುಳಿನ ಸಮಸ್ಯೆಗಳಿಗೆ ಅತ್ಯುತ್ತಮವಾದ ಪರಿಹಾರವಾಗಿದೆ.
ಕಲ್ಲಂಗಡಿ ಹಣ್ಣು ಸಹ ಬೇಸಿಗೆಯಲ್ಲಿ ಬಹಳ ಅವಶ್ಯಕ. ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ದೇಹ ತಂಪಿರುತ್ತದೆ.



