Breaking NewsLatestಆಹಾರಲೈಫ್ ಸ್ಟೈಲ್
ತಿರುಪತಿ ಪ್ರಸಾದದ ಬೆಲೆ ಏರಿಕೆ; ಯಾವುದು ಗೊತ್ತಾ?

ತಿರುಪತಿ: ತಿರುಪತಿ ತಿಮ್ಮಪ್ಪ ಅಂದರೆ ಸಾಕು ಎಲ್ಲರಿಗೂ ಬೇಗ ನೆನಪು ಆಗೋದು ಪ್ರಸಾದ. ಅದು ಎಲ್ಲರಿಗೂ ಇಷ್ಟವಾಗುತ್ತದೆ. ಹೀಗಾಗಿ ಅಲ್ಲಿಗೆ ಹೋದವರು ಅದನ್ನು ಕೇಳಿ ಪಡೆದು ತಿನ್ನುತ್ತಾರೆ. ಅಷ್ಟೇ ಅಲ್ಲದೆ ತಿರುಪತಿ ಪ್ರಸಾದ ಹೊರರಾಜ್ಯಗಳಿಗೂ ರವಾನೆಯಾಗುತ್ತದೆ. ಪ್ರತಿನಿತ್ಯ ದೇವಸ್ಥಾನಕ್ಕೆ ನಾನಾ ಕಡೆಯಿಂದ ಸಾವಿರಾರೂ ಭಕ್ತರು ಆಗಮಿಸುತ್ತಾರೆ. ಕೊರೊನಾದಿಂದ ದೇಗುಲ ಬಂದ್ ಆಗಿದ್ದು, ಭಕ್ತಾಧಿಗಳು ಆನ್ ಲೈನ್ ಮೂಲಕ ಅರ್ಚನೆ ಮಾಡಿಸುತ್ತಿದ್ದರು.
ದೇಗುಲದಲ್ಲಿ ಲಡ್ಡು ಪ್ರಸಾದ ನೀಡುತ್ತಾರೆ. ಇದೀಗ ಪ್ರಸಾದ ಬೆಲೆ ಏರಿಕೆಯಾಗಿದೆ. ಹಾಗಂತ ಲಡ್ಡು ಬೆಲೆ ಏರಿಕೆ ಆಗಿಲ್ಲ. ಜಿಲೇಬಿ ಪ್ರಸಾದದ ಬೆಲೆಯನ್ನು ಹೆಚ್ಚಿಸಿದೆ. 100 ರೂಪಾಯಿ ಇದ್ದ ಜಿಲೇಬಿ ಬೆಲೆ 500 ರೂಪಾಯಿಗೆ ಏರಿಕೆಯಾಗಿದೆ.
