Latestಮನರಂಜನೆಸಿನಿಮಾ

ಅನಾರೋಗ್ಯದಿಂದ ಮಲಯಾಳಂ ಖ್ಯಾತ ನಟಿ ಲಲಿತಾ ನಿಧನ

ಕಳೆದ ತಿಂಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಲಲಿತಾ ಅವರು ನಿಧನಹೊಂದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಅವರ ಅಗಲಿಕೆಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಇನ್ನು ರಾಜಕೀಯ ಗಣ್ಯರು ಕೂಡ ಸಂತಾಪ ಸೂಚಿಸಿದ್ದಾರೆ.

ಕೇರಳ ಪೀಪಲ್ಸ್​ ಆರ್ಟ್​ ಕ್ಲಬ್​ ರಂಗತಂಡದ ಮೂಲಕ ಅಭಿನಯ ಆರಂಭಿಸಿದ್ದ ಲಲಿತಾ ಅವರು ಹೆಸರಾಂತ ನಟಿ ಆಗಿದ್ದರು. 1969ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಅವರು ಪಾದಾರ್ಪಣೆ ಮಾಡಿದ್ದರು. ಹಲವು ಬಗೆಯ ಪಾತ್ರಗಳಿಂದ ಅವರು ಜನಮನ ಗೆದ್ದಿದ್ದರು.

ರಂಗಭೂಮಿ ಹಿನ್ನೆಲೆಯಿಂದ ಲಲಿತಾ ಬಂದಿದ್ದರು. ಒಂದಷ್ಟು ವರ್ಷಗಳ ಕಾಲ ಚಿತ್ರರಂಗದಿಂದ ಬ್ರೇಕ್​ ಪಡೆದುಕೊಂಡಿದ್ದ ಅವರು 1983ರಲ್ಲಿ ಕಮ್​ಬ್ಯಾಕ್​ ಮಾಡಿದ್ದರು. ಲಲಿತಾ ಅವರ ನಿಧನದಿಂದ ಚಿತ್ರರಂಗಕ್ಕೆ ನಷ್ಟವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button