ಆ ದಿನಗಳು ಖ್ಯಾತಿಯ ನಟ ಚೇತನ್ ಪೊಲೀಸ್ ವಶಕ್ಕೆ

ಸದಾ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಾಗುವ ಸ್ಯಾಂಡಲ್ವುಡ್ ನಟ ಚೇತನ್ರನ್ನ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನ್ಯಾಯಾಧೀಶರನ್ನ ನಿಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ದಿನಗಳ ಖ್ಯಾತಿಯ ಚೇನತ್ರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದು ಚೇತನ್ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ಲೈವ್ನಲ್ಲಿ ಮಾತನಾಡಿದ ಚೇತನ್ ಪತ್ನಿ ಮೇಘಾ ಮನೆಯಲ್ಲಿದ್ದ ಚೇತನ್ ಅವರನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದಿದ್ದಾರೆ. ನಾನು ಮನೆಯಲ್ಲಾ ಹುಡುಕಿದೆ, ಚೇತನ್ ಎಲ್ಲಿ ಎಂದು ಅಲ್ಲೇ ಇದ್ದವರನ್ನು ಕೇಳಿದಾಗ ಪೊಲೀಸ್ ನವರು ಕರೆದುಕೊಂಡು ಹೋದರು ಎಂದು ಹೇಳಿದರು. ನಾನು ಶೇಷಾದ್ರಿಪುರಂ ಪೊಲೀಸ್ ಠಾಣೆಯನ್ನು ಸಂಪರ್ಕ ಮಾಡಿದೆ. ಆದರೆ ಅವರಿಂದ ಸಕಾರಾತ್ಮಕವಾಗಿ ಉತ್ತರ ಸಿಗುತ್ತಿಲ್ಲ ಎಂದಿದ್ದಾರೆ.
ಪೊಲೀಸ್ ನವರು ಅವರನ್ನು ಬಂಧಿಸಿದ್ದರೆ, ಯಾವ ಕಾರಣಕ್ಕಾಗಿ ಎನ್ನುವುದನ್ನು ಸ್ಪಷ್ಟಪಡಿಸಬೇಕಿತ್ತು. ಅಥವಾ ಮನೆಯವರಿಗೆ ಮಾಹಿತಿ ನೀಡಬೇಕಿತ್ತು. ಯಾವುದೇ ನೋಟಿಸ್ ನೀಡದೇ, ಮನೆಯವರಿಗೂ ಮಾಹಿತಿ ಕೊಡದೇ ಏಕಾಏಕಿ ಕರೆದುಕೊಂಡು ಹೋಗಿದ್ದಾರೆ ಎಂದು ಚೇತನ್ ಪತ್ನಿ ಮೇಘಾ ದೂರಿದ್ದಾರೆ.
