Latestಟಿವಿಮನರಂಜನೆಸಿನಿಮಾಸೆಲೆಬ್ರಿಟಿ

ಕಿರುತೆರೆ ಮೂಲಕ ಮತ್ತೆ ಎಂಟ್ರಿಕೊಟ್ಟ ಗಡ್ಡಪ್ಪ, ಸೆಂಚುರಿಗೌಡ

ತಿಥಿ ಸಿನಿಮಾದ ಮೂಲಕ ಗಡ್ಡಪ್ಪ ಮತ್ತು ಸೆಂಚುರಿಗೌಡ ಪ್ರೇಕ್ಷಕರನ್ನು ಸಖತ್ ರಂಜಿಸಿದ್ದರು. ಈ ಜೊಡಿ ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿ,ಸಿನಿಮಾದಿಂದಲೇ ಕಾಣೆ ಆಗ್ಬಿಟ್ಟಿದ್ದರು.ಹೀಗಾಗಿ ಅಭಿಮಾನಿಗಳಿಗೆ ಇಬ್ಬರು ಎಲ್ಲಿ ಹೋಗಿದ್ದಾರಪ್ಪ ಎಂಬ ಪ್ರಶ್ನೆ ಮೂಡಿತ್ತು. ಇದೀಗ ಅವರ ಕಡೆಯಿಂದ ಉತ್ತರ ಸಿಕ್ಕಿದೆ. ಗಡ್ಡಪ್ಪ, ಸೆಂಚುರಿ ಗೌಡ ಇಬ್ಬರೂ ಕೂಡ ಹೊಸ ಹುರುಪಿನೊಂದಿಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.ಹಾಗಂತ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಹೌದು ಎಷ್ಟು ದಿನ ಸಿನಿಮಾದಲ್ಲಿ ನಟಿಸಿ ರಂಜಿಸಿದ ಅವರು ಈಗ ಕಿರುತೆರೆಯಲ್ಲಿ ಅವರ ಹವಾ ಶುರುವಾಗಲಿದೆ.ಇಬ್ಬರೂ ಕೂಡ ಒಟ್ಟಿಗೆ ಒಂದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ನಾಗಿಣಿ 2 ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಧಾರಾವಾಹಿಯಲ್ಲಿ ಇಬ್ಬರು ವಿಶೇಷ ಪಾತ್ರ ಮಾಡುತ್ತಿದ್ದಾರೆ. ಮೊದಲನೇ ಎಪಿಸೋಡ್‌ನಲ್ಲಿ ಗಡ್ಡಪ್ಪ ಮತ್ತು ಸೆಂಚುರಿಗೌಡ ಇಬ್ಬರು ಗ್ರ್ಯಾಂಡ್ ಆಗಿ ಎಂಟ್ರಿಕೊಟ್ಟಿದ್ದಾರೆ.

ಒಟ್ಟಾರೆಯಾಗಿ ಸಿನಿಮಾದಲ್ಲಿ ಹವಾ ಸೃಷ್ಟಿಸಿದ ಇವರಿಬ್ಬರು ಇದೀಗ ಕಿರುತೆರೆಯಲ್ಲಿ ಕೊವೆಯವರೆಗೆ ಅವರ ಪಾತ್ರ ಮುಂದುವರೆಯುತ್ತೋ ಇಲ್ವವೋ ಕಾದುನೋಡಬೇಕಿದೆ

Spread the love

Related Articles

Leave a Reply

Your email address will not be published. Required fields are marked *

Back to top button