
ಟೀನಾ ಮತ್ತು ಅನಿಲ್ ಅಂಬಾನಿ ಅವರ ಹಿರಿಯ ಪುತ್ರ ಅನ್ಮೋಲ್ ಅಂಬಾನಿ ಅವರು ಮದುವೆ ಸಂಭ್ರಮದಲ್ಲಿ ಇದ್ದಾರೆ. ಈಗಾಗಲೇ ಅವರ ಮನೆಯಲ್ಲಿ ಮಹೆಂದಿ ಶಾಸ್ತ್ರ ಆಚರಣೆ ನಡೆದಿದೆ. ಈ ಮಹೆಂದಿ ಶಾಸ್ತ್ರದ ಕೆಲ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಇನ್ನು ಮೆಹಂದಿ ಶಾಸ್ತ್ರ ಸಮಾರಂಭದಲ್ಲಿ ರೀಮಾ ಜೈನ್ , ಶ್ವೇತಾ ಮತ್ತು ಜಯಾಬಚ್ಚನ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.
ಅಂದಹಾಗೆ ಅನ್ಮೋಲ್ ಭಾವಿ ಪತ್ನಿ ಕ್ರಿಶಾ ಅವರು ಮುಂಬೈನಲ್ಲಿ ಹುಟ್ಟಿದವರು. ಸಾಮಾಜಿಕ ನೆಟ್ ವರ್ಕಿಂಗ್ ಕಂಪನಿಯಾದ ಡಿಸ್ಕೋದ ಸಂಸ್ಥಾಪಕರೂ ಆಗಿದ್ದಾರೆ. ಇದೀಗ ಅವರು ಮದುವೆಯ ಸಂಭ್ರಮದಲ್ಲಿ ಇದ್ದಾರೆ.



