Latestಮನರಂಜನೆಸಿನಿಮಾಸೆಲೆಬ್ರಿಟಿ

ರಜನಿಕಾಂತ್, ಸಲ್ಮಾನ್ ಖಾನ್ ಆಫರ್ ರಿಜೆಕ್ಟ್ ಮಾಡಿದ್ದ ಜೋಗಿ ಪ್ರೇಮ್

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ನಿರ್ದೇಶಕ ಜೋಗಿ ಪ್ರೇಮ್. ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಆರಂಭದಲ್ಲಿ ಪ್ರೇಮ್ ಹೆಸರು ಜೋರಾಗಿಯೇ ಕೇಳಿ ಬಂದಿತ್ತು. ಪ್ರೇಮ್ ನಿರ್ದೇಶನದ ಎಕ್ಸ್​ಕ್ಯೂಸ್​​ ಮೀ, ಕರಿಯಾ ಹಾಗೂ ಜೋಗಿ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಆ ಬಳಿಕ ಪ್ರೇಮ್ ವ್ಯಾಲ್ಯೂ ಹೆಚ್ಚಾಗಿ ಪರಭಾಷೆಗಳಿಂದಲೂ ಆಫರ್​ಗಳು ಬರೋಕೆ ಶುರುವಾಯ್ತು. ಈ ಬಗ್ಗೆ ಸ್ವತಃ ಪ್ರೇಮ್ ಹೇಳಿಕೊಂಡಿದ್ದಾರೆ.

ಜೋಗಿ ಸಿನಿಮಾ ತೆಲುಗು ಹಾಗೂ ತಮಿಳಿಗೆ ರಿಮೇಕ್ ಆಯಿತು. ತೆಲುಗಿನಲ್ಲಿ ಪ್ರಭಾಸ್, ನಯನತಾರ ನಟಿಸಿದ್ರೆ, ತಮಿಳಿನಲ್ಲಿ ಧನುಷ್ ಹಾಗೂ ಮೀರಾ ಜಾಸ್ಮಿನ್ ಬಣ್ಣ ಹಚ್ಚಿದ್ದರು. ಈ ಸಿನಿಮಾ ಹಿಂದಿ ಭಾಷೆಗೆ ರಿಮೇಕ್ ಆಗಬೇಕಿತ್ತು. ಅಲ್ಲಿ ಸಲ್ಮಾನ್ ಖಾನ್ ನಟಿಸುವ ಕುರಿತು ಮಾತುಕತೆ ನಡೆದಿತ್ತು. ಆದರೆ ಕೊನೆ ಘಳಿಗೆಯಲ್ಲಿ ಅದು ಸಾಧ್ಯವಾಗಲಿಲ್ಲ ಎಂದಿದ್ದಾರೆ ನಿರ್ದೇಶಕ ಪ್ರೇಮ್.

ಜೋಗಿ ಸಿನಿಮಾ ತಮಿಳಿಗೆ ರಿಮೇಕ್ ಮಾಡಲು ರಜನಿಕಾಂತ್ ಕೇಳಿಕೊಂಡಿದ್ದರಂತೆ. ಜೊತೆಗೆ ನಿರ್ದೇಶಕ ಪ್ರೇಮ್ ಮುಂದೆ ನಟಿಸಿ ತೋರಿಸಿದ್ದರಂತೆ. ಆದರೆ ರಜನಿಕಾಂತ್​ರನ್ನ ಜೋಗಿ ಪಾತ್ರದಲ್ಲಿ ಕಲ್ಪಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ರೆಸ್​ಕೋರ್ಸ್ ರಸ್ತೆಯಲ್ಲಿರುವ ಅವರ ಮನೆಗೆ ಹೋಗಿ ಕಾಲಿಗೆ ನಮಸ್ಕಾರ ಮಾಡಿ ಆಗಲ್ಲ ಎಂದೆ. ನನ್ನ ಅಳಿಯ ಧನುಷ್​ಗೆ ಮಾಡು ಎಂದರು. ನನ್ನ ಸಿನಿಮಾವನ್ನ ನಾನೇ ರಿಮೇಕ್ ಮಾಡಲಾರೆ ಎಂದು ಹೇಳಿಬಿಟ್ಟೆ ಎಂದು ಪ್ರೇಮ್ ಹೇಳಿದ್ದಾರೆ.

ಜೋಗಿ ಸಿನಿಮಾ ತೆಲುಗಿನಲ್ಲಿ ಯೋಗಿ ಟೈಟಲ್​ನಲ್ಲಿ ರಿಮೇಕ್ ಆಗಿದೆ. ಈ ವೇಳೆ ಪ್ರಭಾಸ್ ಸಾಕಷ್ಟು ಭಾರಿ ಚಿತ್ರಕ್ಕೆ ಪ್ರೇಮ್ ಅವರೇ ನಿರ್ದೇಶನ ಮಾಡುವಂತೆ ಕೇಳಿಕೊಂಡರಂತೆ. ಆದರೆ ಪ್ರೇಮ್ ನೋ ಎಂದಿದ್ದರಿಂದ ವಿ.ವಿ.ವಿನಾಯಕ ನಿರ್ದೇಶನ ಮಾಡಿದ್ದರು. ಜೊತೆಗೆ ತಮಿಳಿನ ರಿಮೇಕ್​ಗೂ ಅವಕಾಶ ಇತ್ತಂತ. ಆದರೆ ನನ್ನ ಸಿನಿಮಾವನ್ನ ನಾನೇ ಬರೆದು ಅದನ್ನ ತೆರೆ ಮೇಲೆ ತರುವುದರಲ್ಲಿ ತೃಪ್ತಿ ಸಿಗುತ್ತದೆ. ಒಂದು ಬಾರಿ ಮಾಡಿದ್ದನ್ನೇ ಮತ್ತೊಂದು ಬಾರಿ ಮಾಡಲು ಖುಷಿ ಎನಿಸಲ್ಲ ಎಂದಿದ್ದಾರೆ.

ಜೋಗಿ ಸಿನಿಮಾವನ್ನ ಹಿಂದಿಗೆ ರಿಮೇಕ್ ಮಾಡುವಂತೆ ಸಲ್ಮಾನ್ ಖಾನ್ ಪ್ರೇಮ್ ಬಳಿ ಕೇಳಿಕೊಂಡಿದ್ದರಂತೆ. ಪ್ರೇಮ್ ಎಮೋಷನ್ ಅನ್ನು ಚೆನ್ನಾಗಿ ಕ್ಯಾರಿ ಮಾಡುತ್ತಾರೆ. ಅವರು ನಿರ್ದೇಶಿಸಿದರೆ ಮಾತ್ರವೇ ನಾನು ಆ ಸಿನಿಮಾದಲ್ಲಿ ನಟಿಸೋದಾಗಿ ಹೇಳಿದ್ದರಂತೆ. ಆದ್ರೆ ಪ್ರೇಮ್ ಆಸಕ್ತಿ ಇಲ್ಲ ಎಂದು ಹೇಳಿದ್ದರಂತೆ. ಇತ್ತೀಚೆಗೆ ಸುದೀಪ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿಯೂ ಸಲ್ಮಾನ್ ಅಂದು ನೀವು ಒಪ್ಪಿದ್ದರೆ ಜೋಗಿ ಸಿನಿಮಾ ಮಾಡಬಹುದಿತ್ತು ಎಂದಿದ್ದರಂತೆ.

Spread the love

Related Articles

Leave a Reply

Your email address will not be published. Required fields are marked *

Back to top button