Breaking NewsLatestಜಿಲ್ಲಾ ಸುದ್ದಿರಾಜಕೀಯರಾಮನಗರಸುದ್ದಿ

ಜೆಡಿಎಸ್ ಗುಂಪುಗಾರಿಕೆ ಹಿನ್ನೆಲೆ: ಬಿಜೆಪಿ ಸೇರಲು ಹೆಚ್ಡಿಕೆ ಯುವಸೇನೆ ನಿರ್ಧಾರ

ರಾಮನಗರ: ಚನ್ನಪಟ್ಟಣ ತಾಲ್ಲೂಕಿನಲ್ಲಿ ರಾಜಕೀಯ ಸನ್ನಿವೇಶ ಬದಲಾಗಿದೆ. ಸ್ಥಳೀಯ ಜೆಡಿಎಸ್‍ ಗುಂಪುಗಾರಿಕೆಯಿಂದ ಬೇಸತ್ತು, ಹೆಚ್‍ಡಿಕೆ ಯುವಸೇನೆ ಅಧ್ಯಕ್ಷ ಸುಣ್ಣಘಟ್ಟ ಅಶ್ವತ್ಥ್ ಮತ್ತು ಸಂಗಡಿಗರು ಬಿಜೆಪಿಗೆ ಸೇರ್ಪಡೆಯಾಗುವ ನಿರ್ಧಾರ ಪ್ರಕಟಿದ್ದಾರೆ.

ಚನ್ನಪಟ್ಟಣದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಣ್ಣನವರ ರೈತಪರ, ಜನಪರ ಕಾಳಜಿಯನ್ನು ಮೆಚ್ಚಿ ಸುಮಾರು 25 ವರ್ಷಕ್ಕೂ ಹೆಚ್ಚು ಕಾಲಗಳಿಂದ ಅವರ ಕಟ್ಟಾ ಬೆಂಬಲಿಗರಾಗಿ, ಅಧಿಕಾರ  ಇಲ್ಲದಿದ್ದಾಗಲೂ ಜೆಡಿಎಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಾಗಿ, ತಾಲೂಕಿನಲ್ಲಿ ಕೆಲಸ ಮಾಡಿಕೊಂಡು ಹೆಚ್‍ಡಿಕೆ ಸೇನೆಯನ್ನು ಸ್ಥಾಪಿಸಿ ಸೇನೆಯ ಸದಸ್ಯರೆಲ್ಲರೂ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗಳಿಗೂ ಬೈಕ್‍ನಲ್ಲಿಯೇ ತೆರಳಿ ಪಕ್ಷ ಸಂಘಟನೆ ಜೊತೆಗೆ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದೇವೆ ಎಂದರು.

ಕುಮಾಸ್ವಾಮಿಯವರ ಕ್ಷೇತ್ರಕ್ಕೆ ಬಂದರೆ ಗುಂಪುಗಾರಿಕೆಗೆ ಕಡಿವಾಣ ಬೀಳುತ್ತದೆ ಎಂದು ನನ್ನಂತೆ ಪಕ್ಷದ ಹಲವರು ನಿಷ್ಟಾವಂತ ಕಾರ್ಯಕರ್ತರು ನಂಬಿದ್ದೆವು. ಆದರೆ ಅದು ಈಗ ಹುಸಿಯಾಗಿದೆ. ಕುಮಾರಸ್ವಾಮಿ ಅವರು ತಾಲೂಕಿಗೆ ಬಂದ ಮೇಲೆ, ಹಣವುಳ್ಳವರು, ಬ್ರಾಸ್‍ಲೈಟ್, ಬಿಳಿ ಕಾರಿನಲ್ಲಿ ಓಡಾಡುವವರಿಗೆ ಮನ್ನಣೆ ಕೊಡುತ್ತಿದ್ದಾರೆ. ತಾಲೂಕಿನಲ್ಲಿ ಗುಂಪುಗಾರಿಕೆ ಹೆಚ್ಚಾಗಿ ಹಲವು ಗುಂಪುಗಳಾಗಿ ಆಯಾ ಪಕ್ಷದವರನ್ನೇ ಎತ್ತಿ ಕಟ್ಟುವುದು, ಪರಸ್ಪರ ದ್ವೇಷ ಅಸೂಯೇ ಹೆಚ್ಚಾಗುವಂತೆ ಮಾಡುತ್ತಿದ್ದು ಇದರಿಂದ ಬೇಸತ್ತು ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರು ಮತ್ತು ಹೆಚ್‍ಡಿಕೆ ಯುವ ಸೇನೆಯ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಇಂದು ಪಕ್ಷ ತೊರೆಯುವಂತಾಗಿದೆ ಎಂದು ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಚುನಾವಣೆಗಳಲ್ಲಿ ಜೆಡಿಎಸ್‍ನವರ ಎದುರೇ ಜೆಡಿಎಸ್‍ನವರು ಗೆಲುವಿಗಾಗಿ ಗುದ್ದಾಡಬೇಕಾಗಿದೆ. ಇದರಿಂದ ಆರ್ಥಿಕ ನಷ್ಟದ ಜೊತೆಗೆ ಪಕ್ಷಕ್ಕೂ ಬಾರೀ ಹೊಡೆತ ಬೀಳುತ್ತಿದೆ. ಇದನ್ನು ಸರಿಪಡಿಸುವುದು ಕುಮಾರಣ್ಣನವರಿಗೆ ಮಹಾ ಕೆಲಸವೇನೂ ಆಗುವುದಿಲ್ಲ. ಆದರೆ ಅವರು ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ. ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೂ ಅದು ಕೇವಲ 4-5 ಮಂದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಆಗಿದೆಯೇ ಹೊರತು  ನಿಷ್ಡಾವಂತ ಜೆಡಿಎಸ್ ಕಾರ್ಯಕರ್ತರಿಗೆ, ಮುಖಂಡರಿಗೆ ಆಗಿಲ್ಲ ಎಂದು ಕಿಡಿಕಾರಿದರು.

ನಾನು ರಾಜಕಾರಣ ಬಿಡುವ ಮಾತೇ ಇಲ್ಲ. ಮುಂದಿನ ದಿನಗಳಲ್ಲಿ ನನ್ನೊಂದಿಗೆ ನನ್ನಂತೆ ನೊಂದ ಕಾರ್ಯಕರ್ತರು, ಸ್ನೇಹಿತರನ್ನು ಕೂಡಿ ಬಿಜೆಪಿ ಪಕ್ಷದೊಂದಿಗೆ ಸೇರಿಕೊಂಡು ನಮ್ಮ‌ ರಾಜಕೀಯ ಜೀವನವನ್ನು ಮುಂದುವರೆಸುತ್ತೇವೆ ಎಂದು ತಮ್ಮ ನಿರ್ಧಾರ ಪ್ರಕಟಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಶಿವರಾಮು, ಬಿ ವಿ ಹಳ್ಳಿ ಚಾಮರಾಜು, ಹೊಡಕೆಹೊಸಹಳ್ಳಿ ಶಿವು, ಮಹಿಳಾ ಘಟಕದ ಅಧ್ಯಕ್ಷೆ ವಸಂತಮ್ಮ, ರತ್ನಮ್ಮ, ಕೆ. ಜಯರಾಮು, ರೋಷನ್, ಅಮಿನ್ ಮತ್ತಿತರರು ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button