Latestಮನರಂಜನೆಸಿನಿಮಾಸೆಲೆಬ್ರಿಟಿ

ನಾನು ಒಳಗೇ ಸತ್ತಿದ್ದೇನೆ: ದೀಪ್ ಸಿಧು ಸಾವಿನ ಬಳಿಕ ಗೆಳತಿ ರೀನಾ ರಾಯ್ ಮೊದಲ ಪೋಸ್ಟ್

ಪಂಜಾಬಿ ನಟ ದೀಪ್ ಸಿಧು ಹಠಾತ್ ಸಾವಿನಿಂದ ಅಭಿಮಾನಿಗಳು ಅಘಾತಕ್ಕೀಡಾಗಿದ್ದಾರೆ. ಮಂಗಳವಾರ ರಾತ್ರಿ ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್​ಪ್ರೆಸ್​ವೇಯಲ್ಲಿ ದೀಪ್ ಸಿಧು ಚಲಾಯಿಸುತ್ತಿದ್ದ ಬಿಳಿ ಬಣ್ಣದ ಮಹೀಂದ್ರಾ ಸ್ಕಾರ್ಪಿಯೋ ಕಾರು ಟ್ರಕ್​ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ವೇಳೆ ದೀಪ್ ಸಿಧು ಗೆಳತಿ ರೀನಾ ರಾಯ್ ಕೂಡ ಕಾರಿನಲ್ಲಿದ್ದು ಕೂದಲೆಳೆ ಅಂತರದಲ್ಲಿ ಪರಾಗಿದ್ದಾರೆ. ಇದೀಗ ಸ್ನೇಹಿತನ ಸಾವಿನ ಬಳಿಕ ರೀನಾ ರಾಯ್ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನ ತೋಡಿಕೊಂಡಿದ್ದಾರೆ.

ದೀಪ್ ಸಿಧು ಜೊತೆಗಿನ ಕೆಲವು ಹಳೆಯ ಫೋಟೋಗಳನ್ನ ಶೇರ್ ಮಾಡಿರುವ ರೀನಾ “ನಾನು ಚದುರಿ ಹೋಗಿದ್ದೇನೆ. ನಾನು ಒಳಗೇ ಸತ್ತಿದ್ದೇನೆ. ದಯವಿಟ್ಟು ಹಿಂತಿರುಗಿ ಬಾ ನನ್ನ ಆತ್ಮ ಸಂಗಾತಿ. ನನ್ನನ್ನು ಎಂದಿಗೂ ಬಿಡುವುದಿಲ್ಲ ಎಂದು ನೀನು ನನಗೆ ಭರವಸೆ ನೀಡಿದ್ದೀಯಾ. ನಾನು ನಿನ್ನನ್ನು ಪ್ರೀತಿಸುತ್ತೇನೆ. ಐ ಲವ್ ಯೂ ಮೇರಿ ಜಾನ್. ನನ್ನ ಆತ್ಮ ಸಂಗಾತಿ ನೀನು ನನ್ನ ಹೃದಯ ಬಡಿತದಂತಿರುವಿ” ಎಂದು ಬರೆದುಕೊಂಡಿದ್ದಾರೆ.

“ಇಂದು ನಾನು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದಾಗ ನೀನೇ ಬಂದು ನನ್ನ ಕಿವಿಯಲ್ಲಿ ಐ ಲವ್ ಮೇರಿ ಜಾನ್ ಎಂದು ಹೇಳಿದ ಹಾಗಾಯ್ತು. ನೀವು ಯಾವಾಗಲು ನನ್ನೊಂದಿಗೆ ಇರುತ್ತೀರಿ ಎಂದು ನನಗೆ ಗೊತ್ತಿದೆ. ನಾಳಿನ ನಮ್ಮ ಭವಿಷ್ಯದ ಕನಸನ್ನು ನಾವಿಬ್ಬರೂ ಒಟ್ಟಾಗಿ ಕಂಡಿದ್ದೆವು. ಈಗ ನೀವು ಹೋಗಿದ್ದೀರಿ. ಆತ್ಮ ಸಂಗಾತಿಗಳು ಎಂದಿಗೂ ದೂರವಾಗುವುದಿಲ್ಲ. ಮುಂದೊಂದು ದಿನ ಮತ್ತೆ ಇಬ್ಬರೂ ಭೇಟಿಯಾಗೋಣ ಎಂದು ಇನ್​ಸ್ಟಾಗ್ರಾಮ್ ಖಾತೆಯಲ್ಲಿ ರೀನಾ ರಾಯ್ ಬರೆದುಕೊಂಡಿದ್ದಾರೆ.

ಸಿಧು ಹಾಗೂ ರೀನಾ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸದ್ಯದಲ್ಲೇ ಹಸೆಮಣೆ ಏರಬೇಕಿತ್ತು. ರೀನಾ ಹಾಗೂ ದೀಪ್ ಅನೇಕ ಪಂಜಾಬಿ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಸಿಧು ಹಾಗೂ ರೀನಾ ಮೊದಲು ಸ್ನೇಹಿತರಾಗಿದ್ದು ಬಳಿಕ ಪ್ರೀತಿಯಲ್ಲಿ ಬಿದ್ದು ಇತ್ತೀಚೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ಎಂಗೇಜ್​ಮೆಂಟ್ ಮಾಡಿಕೊಂಡಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button