ಯುಪಿ, ಉತ್ತರಾಖಂಡ, ಗೋವಾಗಳಲ್ಲಿ ಮತದಾನ ಪ್ರಗತಿಯಲ್ಲಿ

ನವದೆಹಲಿ: ಗೋವಾ ಮತ್ತು ಉತ್ತರಾಖಂಡದಲ್ಲಿ ಒಂದೇ ಹಂತದ ವಿಧಾನಸಭೆ ಚುನಾವಣೆಗೆ ಹಾಗೂ ಉತ್ತರ ಪ್ರದೇಶದಲ್ಲಿ ಒಟ್ಟು 7 ಹಂತಗಳಲ್ಲಿ 2 ನೇ ಹಂತದ ಚುನಾವಣೆಗೆ ಶಾಂತಿಯುತ ಮತದಾನ ಆರಂಭವಾಗಿದೆ. ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಉತ್ತರ ಪ್ರದೇಶದ 9 ಜಿಲ್ಲೆಗಳ 55 ವಿಧಾನಸಭೆ ಸ್ಥಾನಗಳಿಗೆ ಸೋಮವಾರ ಬೆಳಗ್ಗೆ ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ ಇದು 2ನೇ ಹಂತದ ವಿಧಾನಸಭೇ ಚುನಾವಣೆ, ಸಹರಾನ್ ಪುರ, ಬಿಜ್ನೋರ್, ಮೊರಾದಾಬಾದ್, ಸಂಭಾಲ್, ರಾಂಪುರ, ಅಮ್ರೋಹಾ, ಬುಡೌನ್, ಬರೇಲಿ ಮತ್ತು ಷಹಜಹಾನ್ ಪುರ ಕ್ಷೇತ್ರಗಳಲ್ಲಿ ಮತದಾನ ಪ್ರಗತಿಯಲ್ಲಿದೆ. ಒಟ್ಟು 586 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 7 ಹಂತದ ುತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಫೆ.10ರಂದು ನಡೆದಿತ್ತು. ಮಾ.10ರಂದು ಫಲಿತಾಂಶಗಳು ಪ್ರಕಟವಾಗಲಿವೆ.
ಗೋವಾದ 40 ಹಾಗೂ ಉತ್ತರಾಖಂಡದ 70 ವಿಧಾನಸಭೆಗಳಿಗೂ ಸೋಮವಾರ ಒಂದೇ ಹಂತದ ಚುನಾವಣೆಗೆ ಮತದಾನ ಆರಂಭವಾಗಿದ್ದು ಪ್ರಗತಿಯಲ್ಲಿದೆ. ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಮತದಾನಕ್ಕೆ ಭದ್ರತೆ ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ.
