ರಾಮ್ರಾಜ್ ರಾಯಭಾರಿಯಾದ ರಾಕಿಂಗ್ ಸ್ಟಾರ್

ರಾಕಿಂಗ್ ಸ್ಟಾರ್ ಯಶ್ ಈಗಾಗ್ಲೆ ಸಾಕಷ್ಟು ಜಾಹಿರಾತುಗಳ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ರಾಕಿ ಬಾಯ್ ಸಾಂಪ್ರದಾಯಿಕ ಧೋತಿ ಬ್ರಾಂಡ್ ರಾಮರಾಜ್ ಜೊತೆ ಕೈ ಜೋಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕರಣೆ ನೀಡಿರುವ ರಾಮ್ರಾಜ್ ಸಂಸ್ಥೆ ಯಶ್ ರಾಷ್ಟ್ರ ಮಟ್ಟದಲ್ಲಿ ನಮ್ಮ ಬ್ರಾಂಡ್ ಅನ್ನು ಪ್ರತಿನಿಧಿಸಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದ ಪ್ರಚಾರ ಕಾರ್ಯಗಳಲ್ಲಿ ಅವರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದೆ.
ಯಶ್ ನಮ್ಮ ಸಂಸ್ಥೆಯ ಭಾಗವಾಗಿರೋದಕ್ಕೆ ಹೆಮ್ಮಯಾಗುತ್ತಿದೆ. ರಾಮ್ರಾಜ್ ಸಂಸ್ಥೆ ಈಗಾಗ್ಲೆ 10 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗಾವಕಾಶ ನೀಡಿದ್ದು 50 ಸಾವಿರಕ್ಕೂ ಅಧಿಕ ನೇಕಾರರು ನಮ್ಮ ಕಂಪೆನಿ ಜೊತೆ ಗುರುತಿಸಿಕೊಂಡಿದ್ದಾರೆ. ಯಶ್ ನಮ್ಮ ಕುಟುಂಬದ ಹೊಸ ಸದಸ್ಯರಾಗಿರೋದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೆಜಿಎಫ್ ಚಿತ್ರದಲ್ಲಿ ತಮ್ಮ ಪಾತ್ರದ ಮೂಲಕ ಯಶ್ ದೇಶಾದ್ಯಂತ ಸಂಚಲನೆ ಮೂಡಿಸಿದ್ದಾರೆ. ಯಶೋಮಾರ್ಗದ ಮೂಲಕ ಅನೇಕ ಸಮಾಜಮುಖಿ ಕೆಲಸಗಳನ್ನ ಯಶ್ ಮಾಡಿದ್ದಾರೆ. ಅವರು ನಮ್ಮ ಸಂಸ್ಥೆಯ ಮುಖವಾಣಿಯಾಗಿರುತ್ತಾರೆ ಎಂದು ಘೋಷಿಸಲು ಹೆಮ್ಮೆ ಪಡುತ್ತೇವೆ ಎಂದು ರಾಮ್ರಾಜ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.



