
ಶಕ್ತಿಮಾನ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಶಕ್ತಿಮಾನ್ ಧಾರಾವಾಹಿ ನೋಡಿದ ಮಕ್ಕಳೆಲ್ಲ ನಾವು ಶಕ್ತಿಮಾನ್ ತರನೇ ಆಗಬೇಕು ಅಂದುಕೊಳ್ಳುತ್ತಾರೆ. ಈ ಧಾರಾವಾಹಿ ಕೇವಲ ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಇಷ್ಟವಾಗುತ್ತದೆ.
90 ರ ದಶಕದಲ್ಲಿ ಶಕ್ತಿಮಾನ್ ಧಾರಾವಾಹಿ ಬಂದಿತ್ತು. ಇದನ್ನು ನೋಡಲು ಎಲ್ಲರೂ ಟಿ.ವಿ ಮುಂದೆ ಕುಳಿತುಕೊಳ್ಳುತ್ತಿದ್ದರು. ಆದರೆ ಈ ಧಾರಾವಾಹಿ ಮುಕ್ತಾಯಗೊಂಡಿದ್ದಕ್ಕೆ ಅದೆಷ್ಟೋ ಜನರಿಗೆ ಬೇಸರವಾಗಿತ್ತು. ಅಷ್ಟಕ್ಕೂ ಈಗ ಯಾಕೆ ಶಕ್ತಿಮಾನ್ ಬಗ್ಗೆ ಹೇಳುತ್ತ ಇದ್ದೇನಿ ಅಂದುಕೊಂಡ್ರಾ?…..
ಹೌದು ಕಿರುತೆರೆಯಲ್ಲಿ ಮನೆ ಮಾತಾಗಿದ್ದ ಶಕ್ತಿಮಾನ್ ಧಾರವಾಹಿ ಇದೀಗ ಬೆಳ್ಳಿತೆರೆ ಮೇಲೆ ಬರೋದಕ್ಕೆ ಸಜ್ಜಾಗಿದೆ. ಇತ್ತೀಚೆಗೆ ಶಕ್ತಿಮಾನ್ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಈ ಬಗ್ಗೆ ಸೋನಿ ಪಿಕ್ಚರ್ಸ್ ಘೋಷಣೆ ಮಾಡಿದ್ದು, ಟ್ವಿಟರ್ ನಲ್ಲಿ ಸೂಪರ್ ಹೀರೋ ಧರಿಸಿರುವ ಲೋಗೋ ತೋರಿಸಲಾಗಿದೆ.
ಈ ಹಿಂದೆ ಶಕ್ತಿಮಾನ್ ಧಾರಾವಾಹಿಯಲ್ಲಿ ಮುಖೇಶ್ ಖನ್ನಾ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಚಿತ್ರದಲ್ಲಿ ಈ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ. ರಿಲೀಸ್ ಆದ ಟೀಸರ್ ನಲ್ಲಿ ಶಕ್ತಿಮಾನ್ ಡ್ರೆಸ್ ತೋರಿಸಲಾಗಿದ್ದು, ಅಭಿಮಾನಿಗಳಿಗೆ ಚಿತ್ರದ ಕುರಿತು ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.



