Breaking NewsLatestಜಿಲ್ಲಾ ಸುದ್ದಿಮಂಡ್ಯ

ಒಂದೇ ಕುಟುಂಬದ ಐವರ ಕೊಲೆ ಪ್ರಕರಣ : ಎರಡೇ ದಿನದಲ್ಲಿ ಆರೋಪಿ ಬಂಧಿಸಿದ ಪೊಲೀಸರು

ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​​​ಎಸ್‍ನ ಬಜಾರ್ ಲೈನ್ ಬಡಾವಣೆಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಐವರನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆ ಭೇದಿಸಿರುವ ಪೊಲೀಸರು ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ.

ಫೆಬ್ರವರಿ 6ರಂದು ಮಂಡ್ಯದ ಕೆಆರ್ ಎಸ್‍ನ ಬಜಾರ್ ಲೈನ್ ಬಡಾವಣೆಯಲ್ಲಿ ಗಂಗಾರಾಮ್ ಅವರ ಪತ್ನಿ ಲಕ್ಷ್ಮೀ (32), ಹಾಗೂ ರಾಜ್ (13), ಕೋಮಲ್ (7), ಕುನಾಲ್ (4), ಗೋವಿಂದ (8) ಅಂದು ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ಈ ಮುಗ್ಧ ಜೀವಗಳ ಕೊಲೆಗೆ ಗಂಡ ಗಂಗಾರಾಮನ ಪ್ರೇಮಿಕಾಳೇ ಕಾರಣ ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಗಂಗಾರಾಮ್ ಸಂಬಂಧಿ ಲಕ್ಷ್ಮೀ(34) ಎಂಬವಳು ಗಂಗಾರಾಮನನ್ನು ಪ್ರೇಮಿಸುತ್ತಿದ್ದಳು ಹಾಗೂ ನನ್ನನ್ನು ಮದುವೆಯಾಗು ಎಂದು ಗಂಗಾರಾಮನನ್ನು ಪೀಡಿಸುತ್ತಿದ್ದಳು. ಆದರೆ ಮನೆಯವರ ಒತ್ತಾಯಕ್ಕೆ ಮಣಿದು ಆತ ಲಕ್ಷ್ಮೀಯನ್ನು ಮದುವೆಯಾಗಿದ್ದ. ಇದಾದ ಬಳಿಕವೂ ಸಹ ಗಂಗಾರಾಮ್ ಮತ್ತು ಕೊಲೆ ಪಾತಕಿ ಲಕ್ಷ್ಮಿ ಹೆಂಡತಿ ಮಕ್ಕಳನ್ನು ತೊರೆದು ಬಿಟ್ಟು ತನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದಳು ಎನ್ನಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button