Latestಮನರಂಜನೆಸಿನಿಮಾಸೆಲೆಬ್ರಿಟಿ

ಪ್ರಭಾಸ್​ ಜೊತೆಗಿನ ಫೋಟೋ ಹಂಚಿಕೊಂಡ ಅನುಷ್ಕಾ ಶೆಟ್ಟಿ

ಟಾಲಿವುಡ್ ನಟ ಪ್ರಭಾಸ್ ಹಾಗೂ ನಟಿ ಅನುಷ್ಕಾ ಶೆಟ್ಟಿ ಹೆಸರು ಆಗಾಗ ಕೇಳಿ ಬರುತ್ತಲೆ ಇರುತ್ತದೆ. ಸಿನಿಮಾಗಳಿಗಿಂತ ಬೇರೆ ವಿಷಯಕ್ಕೆ ಈ ಜೋಡಿಗಳು ಸುದ್ದಿಯಾಗಿದ್ದು ಹೆಚ್ಚು. ಅದ್ರಲ್ಲೂ ಬಾಹುಬಲಿ ಸಿನಿಮಾ ತೆರೆಗೆ ಬಂದ ಬಳಿಕ ಪ್ರಭಾಸ್ ಹಾಗೂ ಅನುಷ್ಕಾ ಹಸೆಮಣೆ ಏರಲಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಇದೀಗ ಸಾಕಷ್ಟು ದಿನಗಳ ಬಳಿಕ ಅನುಷ್ಕಾ ಪ್ರಭಾಸ್​ರನ್ನ ನೆನಪು ಮಾಡಿಕೊಂಡಿದ್ದು ಫೋಟೋವೊಂದನ್ನ ಶೇರ್ ಮಾಡಿದ್ದಾರೆ.

ಅನುಷ್ಕಾ ಶೆಟ್ಟಿ ಶೇರ್ ಮಾಡಿರೋ ಪೋಟೋಗೆ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಅಂದ್ಹಾಗೆ ಅನುಷ್ಕಾ ಶೆಟ್ಟಿ ಹಂಚಿಕೊಂಡಿರೋದು ಮಿರ್ಚಿ ಚಿತ್ರದ ಫೋಟೋವನ್ನ.ಮಿರ್ಚಿಯಲ್ಲಿ ಅನುಷ್ಕಾ ಹಾಗೂ ಪ್ರಭಾಸ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಚಿತ್ರ ಅನುಷ್ಕಾ ವೃತ್ತಿ ಜೀವನದಲ್ಲಿ ಸಾಕಷ್ಟು ಹೆಸ್ರು ತಂದುಕೊಟ್ಟಿತ್ತು. ಇದೇ ಕಾರಣಕ್ಕೆ ಅನುಷ್ಕಾ ತಮ್ಮ ಹಳೆಯ ಪೋಟೋವನ್ನ ಹಂಚಿಕೊಂಡಿದ್ದಾರೆ.

ಕೊರಟಾಲ ಶಿವ ನಿರ್ದೇಶನದ ಮಿರ್ಚಿ ಸಿನಿಮಾ ರಿಲೀಸ್ ಆಗಿ 9 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಅನುಷ್ಕಾ ಮಿರ್ಚಿ ಚಿತ್ರದ ಫೋಟೋವನ್ನ ಶೇರ್ ಮಾಡಿದ್ದಾರೆ. ಜೊತೆಗೆ ಪ್ರತಿಯೊಬ್ಬರಿಗೂ ಧನ್ಯವಾದಗಳು. ಬ್ಲಾಕ್ ಬಾಸ್ಟರ್ ಮಿರ್ಚಿಗೆ 9 ವರ್ಷಗಳು ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದ ಅನುಷ್ಕಾ ಮತ್ತೆ ಫಿಲ್ಡ್​ಗೆ ಮರಳಿದ್ದಾರೆ. ಮಿರ್ಚಿ ಸಿನಿಮಾ ನಿರ್ಮಾಣ ಮಾಡಿದ್ದ ಯುವಿ ಕ್ರಿಯೇಷನ್ ಬ್ಯಾನರ್​ನಲ್ಲಿ ಅನುಷ್ಕಾ ಮತ್ತೆ ನಟಿಸಲಿದ್ದಾರೆ. ಪಿ ಮಹೇಶ್ ಬಾಬು ಎಂಬುವವರು ಈ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button