ಮನರಂಜನೆಸಿನಿಮಾಸೆಲೆಬ್ರಿಟಿ

ಮೆಟ್ರೋ ನಿಲ್ದಾಣಕ್ಕೆ ಪುನೀತ್ ರಾಜ್​ಕುಮಾರ್ ಹೆಸರಿಡಲು ಒತ್ತಾಯ

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಗಲಿ ಮೂರು ತಿಂಗಳು ಕಳೆದು ಹೋಗಿದೆ. ಇಂದಿಗೂ ಅಪ್ಪುಗಾಗಿ ಕೋಟ್ಯಾಂತರ ಹೃದಯಗಳು ಮಿಡಿಯುತ್ತಿವೆ. ಲಕ್ಷಾಂತರ ಮಂದಿ ಅಪ್ಪು ಜೀವಂತವಾಗಿಯೇ ಇದ್ದಾರೆ ಎಂದುಕೊಂಡು ದಿನ ದೂಡುತ್ತಿದ್ದಾರೆ. ಈಗಾಗ್ಲೆ ಅಪ್ಪು ಹೆಸರಿನಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳು ನಡೆಯುತ್ತಿವೆ. ಜೊತೆಗೆ ಕೆಲವು ರಸ್ತೆ, ಪಾರ್ಕ್​ಗಳಿಗೆ ಅಪ್ಪು ಹೆಸರನ್ನ ಇಡಲಾಗಿದೆ. ಇದರ ಜೊತೆಗೆ ಪುನೀತ್ ಹೆಸರನ್ನ ಮೆಟ್ರೋ ನಿಲ್ದಾಣಕ್ಕೆ ಇಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

ನಟ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಿಧನದ ಬಳಿಕ ಅಭಿಮಾನಿಗಳ ಚಿತ್ತ ಸಮಾಜ ಸೇವೆಯತ್ತ ಅನ್ನೋ ರೀತಿಯಾಗಿದೆ. ಈಗಾಗ್ಲೆ ಸಾವಿರಾರು ಮಂದಿ ನೇತೃದಾನಕ್ಕೆ ಸಹಿ ಹಾಕುವ ಮೂಲಕ ಅಪ್ಪು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿದ್ದಾರೆ. ಇದ್ರ ಜೊತೆಗೆ ಸಮಾಜ ಸೇವೆಯಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.

ಪುನೀತ್ ಹೆಸರನ್ನ ಅಮರವಾಗಿಡಲು ಸಾಕಷ್ಟು ಮಂದಿ ಸಾಕಷ್ಟು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಈಗಾಗ್ಲೆ ರಸ್ತೆ, ಪಾರ್ಕ್​​ಗಳಿಗೆ ಅಪ್ಪು ಹೆಸರನ್ನ ಇಡಲಾಗಿದೆ. ಇದ್ರ ಜೊತೆಗೆ ಬೆಂಗಳೂರಿನ ಪುಲಕೇಶಿ ನಗರದ ಪಾಟರಿ ರಸ್ತೆಯಲ್ಲಿರೋ ಫೆದರ್ ಲೈಟ್ ಶಾಲೆಯ ಬಳಿ ಹೊಸ ಮೆಟ್ರೋ ನಿಲ್ದಾಣ ನಿರ್ಮಾಣವಾಗ್ತಿದ್ದು ಇದಕ್ಕೆ ಅಪ್ಪು ಹೆಸರಿಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಕರ್ನಾಟಕ ಬಹುಜನ ಫೆಡರೇಷನ್ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜೊತೆಗೆ ಬಿಎಂಆರ್​ ಸಿವಿಲ್​ಗೂ ಪತ್ರ ಬರೆದಿದ್ದಾರೆ.

ಅಭಿಮಾನಿಗಳು ಸಲ್ಲಿಸಿರುವ ಮನವಿ ಪುರಸ್ಕರಿಸಿ ಪ್ರಧಾನಿ ಕಚೇರಿ ಉತ್ತರ ಕೊಟ್ರೆ ಮೆಟ್ರೋ ನಿಲ್ದಾಣಕ್ಕೆ ಅಪ್ಪು ಹೆಸರಿಡೋದಾಗಿ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಛೋಪ್ರಾ ಭರವಸೆ ನೀಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button