Breaking NewsLatestಮನರಂಜನೆಸಿನಿಮಾಸೆಲೆಬ್ರಿಟಿ

ಹೃದಯಾಘಾತದಿಂದ ಮಹಾಭಾರತದ ಭೀಮನ ಪಾತ್ರಧಾರಿ ನಿಧನ

ಬಾಲಿವುಡ್ ಚಿತ್ರರಂಗಕ್ಕೆ ಮತ್ತೊಂದು ಕಹಿ ಘಟನೆ ಎದುರಾಗಿದೆ. ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರನ್ನ ಕಳೆದುಕೊಂಡಿರೋ ಚಿತ್ರರಂಗ ಇದೀಗ ಮಹಾಭಾರತ ಕಿರುತೆರೆ ಧಾರವಾಹಿಯ ಭೀಮನ ಪಾತ್ರಧಾರಿ ಪ್ರವೀಣ್ ಕುಮಾರ್ ಸೋಬ್ತಿ ಅವರನ್ನ ಕಳೆದುಕೊಂಡಿದೆ. 74 ವರ್ಷ ವಯಸ್ಸಿನ ಪ್ರವೀಣ್ ಕುಮಾರ್ ಸೋಬ್ತಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ತಮ್ಮ ದೊಡ್ಡ ದೇಹದಿಂದಲೇ ಹೆಸರುವಾಸಿಯಾಗಿದ್ದ ಪ್ರವೀಣ್ ಕುಮಾರ್ ಸೋಬ್ತಿ ಅನೇಕ್ ಬಾಲಿವುಡ್ ಸಿನಿಮಾಗಳಲ್ಲಿ ವಿಲನ್ ಪಾತ್ರಧಾರಿಯಾಗಿ ಹೆಸರು ಮಾಡಿದ್ದರು. ಆರೂವರೆ ಅಡಿ ಎತ್ತರದ ಸೋಬ್ತಿ ಚಿತ್ರರಂಗಕ್ಕೆ ಬರುವ ಮೊದಲು ಹ್ಯಾಮರ್ ಥ್ರೋ ಹಾಗೂ ಡಿಸ್ಕಸ್ ಥ್ರೋ ಆಟಗಾರರಾಗಿಯೂ ಹೆಸರು ಮಾಡಿದ್ದರು.

1966 ಹಾಗೂ 1970ರಲ್ಲಿ ಬ್ಯಾಂಕಾಕ್​ನಲ್ಲಿ ನಡೆದ ಏಷ್ಯನ್ ಗೇಮ್ಸ್​ನ ಡಿಸ್ಕಸ್ ಥ್ರೋನಲ್ಲಿ ಪ್ರವೀಣ್ ಚಿನ್ನದ ಪದಕ ಪಡೆದಿದ್ರೆ, ಹ್ಯಾಮರ್ ಎಸೆತದಲ್ಲಿ ಕಂಚಿಕ ಪದಕ ಗೆದ್ದಿದ್ದರು. ಜೊತೆಗೆ 1974ರಲ್ಲಿ ಟೆಹ್ರಾನ್​ನಲ್ಲಿ ನಡೆದ ಏಷ್ಯನ್ ಗೇಮ್ಸ್​ನ ಡಿಸ್ಕಸ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಪ್ರವೀಣ್ ಕುಮಾರ್​ಗೆ ಸಿನಿಮಾಗೆ ಬರೋ ಮೊದಲು ಗಡಿ ಭದ್ರತಾ ಪಡೆಯಲ್ಲಿ ಡೆಪ್ಯುಟಿ ಕಮಾಂಡೆಂಟ್ ಹುದ್ದೆ ದೊರೆತಿತ್ತು. ಇದೇ ವೇಳೆ ಬಿ ಆರ್ ಚೋಪ್ರಾ ಮಹಾಭಾರತ ಸಿನಿಮಾ ನಿರ್ಮಾಣ ಮಾಡುತ್ತಿರೋ ಬಗ್ಗೆ ಸ್ನೇಹಿತನ ಮೂಲಕ ಪ್ರವೀಣ್​ಗೆ ಗೊತ್ತಾಗಿದೆ. ಮಹಾಭಾರತ ಧಾರವಾಹಿಯಲ್ಲಿ ಭೀಮನ ಪಾತ್ರಧಾರಿಗೆ ಶಕ್ತಿಶಾಲಿ ವ್ಯಕ್ತಿಯನ್ನ ಹುಡುಕುತ್ತಿದ್ದಾರೆ. ನೀವು ಒಮ್ಮೆ ಹೋಗಿ ಭೇಟಿ ಮಾಡಬೇಕು ಎಂದು ನಿರ್ಮಾಪಕರು ಬಯಸುತ್ತಿದ್ದಾರೆ ಎಂದು ಸ್ನೇಹಿತ ಪ್ರವೀಣ್​ಗೆ ಹೇಳಿದ್ದಾರೆ. ಹೀಗಾಗಿ ಪ್ರವೀಣ್​ ಬಿಎಸ್​ಎಫ್ ಕೆಲಸ ಬಿಟ್ಟು ಮಹಾಭಾರತದ ಭೀಮನ ಪಾತ್ರಕ್ಕೆ ಸೇರಿಕೊಳ್ತಾರೆ. ಈ ಪಾತ್ರ ಪ್ರವೀನ್ ಕುಮಾರ್ ಸ್ತೋಬಿ ಅವರಿಗೆ ಸಾಕಷ್ಟು ಹೆಸ್ರು ತಂದುಕೊಟ್ಟಿತು.

2013ರಲ್ಲಿ ಆಮ್ ಆದ್ಮಿ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟ ಪ್ರವೀಣ್ ಕುಮಾರ್ ಸೋಬ್ತಿ ಅಜೀರ್​ಪುರದಿಂದ ದೆಹಲಿ ವಿಧಾನಸಭೆ ಚುನಾವಣೆಗೆ ಸ್ವರ್ಧಿಸಿದ್ದರು. ಆದರೆ ಸೋಲು ಅನುಭವಿಸಿದ್ದರು. ಬಳಿಕ 2014ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿದರು.

Spread the love

Related Articles

Leave a Reply

Your email address will not be published. Required fields are marked *

Back to top button