Breaking NewsLatestರಾಜಕೀಯರಾಷ್ಟ್ರೀಯಸುದ್ದಿ

ಬಿಜೆಪಿಯಿಂದ ದೇಶದಲ್ಲಿ ಅಕ್ರಮಣಾಕಾರಿ ರಾಜಕಾರಣ: ಸಚಿನ್ ಪೈಲೆಟ್ ವಾಗ್ದಾಳಿ

ಜೈಪುರ: ಬಿಜೆಪಿಯಿಂದ ದೇಶದಲ್ಲಿ ಅಕ್ರಮಣಾಕಾರಿ ರಾಜಕಾರಣ ಶುರುವಾಗಿದೆ ಎಂದು ಮಾಜಿ ಡಿಸಿಎಂ, ಕಾಂಗ್ರೆಸ್ ಯುವ ಮುಖಂಡ ಸಚಿನ್ ಪೈಲೆಟ್ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಸರಿಪಡೆ ದೇಶದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅಪಾಯಕಾರಿಯಾದ ಅಕ್ರಮಣಾಕಾರಿ ರಾಜಕೀಯದ  ಪ್ರವೃತ್ತಿ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಭಾರತ ವೈವಿಧ್ಯಮಯ ಸಂಸ್ಕೃತಿಯ ದೇಶ. ಪ್ರಜಾಪ್ರಭುತ್ವದಲ್ಲಿ ವಿಭಿನ್ನ ವಿಚಾರಧಾರೆಯ ಜನರು ತಮ್ಮದೇ ಚಿಂತನೆಗಳನ್ನು ಹೊಂದಿರುತ್ತಾರೆ. ತಪ್ಪು-ಒಪ್ಪುಗಳ ಬಗ್ಗೆ ಜನ ತೀರ್ಮಾನಿಸುತ್ತಾರೆ ಎಂದರು. ಯಾವುದೇ ವಿಚಾರ, ಚರ್ಚೆಗಳು ಆರೋಗ್ಯಕರವಾಗಿರಬೇಕು. ಸೈದ್ಧಾಂತಿಕ ಭಿನ್ನಾಭಿಪ್ರಾಯದ ನಡುವೆ ಸುಸಂಸ್ಕೃತ ಭಾಷೆ ಬಳಸಬೇಕು ಮತ್ತು ಹಿಂಸೆಗೆ ಯಾವುದ ಸ್ಥಾನ ಇರಬಾರದು ಎಂದೂ ಅವರು ಹೇಳಿದರು.

ರಾಜಸ್ಥಾನ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿ, ಸಂಪುಟದಲ್ಲಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗದು. ಆದರೆ ಸರ್ಕಾರದಲ್ಲಿ ಅವರ ಪಾಲುದಾರಿಕೆಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಸರಿಯಾದ ನಿರ್ಧಾರಗಳನ್ನು ಕೈಗೊಂಡು ಸರಿಯಾದ ತೀರ್ಮಾನಗಳನ್ನು ಕೈಗೊಳ್ಳುತ್ತಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಮತ್ತೆ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button