ಚಿಕ್ಕಮಗಳೂರುಜಿಲ್ಲಾ ಸುದ್ದಿ

ದತ್ತಪೀಠಕ್ಕೆ ಅರ್ಚಕರ ನೇಮಕ: ಫೆ.7ರಂದು ಸಚಿವ ಸಂಪುಟದ ಉಪಸಮಿತಿ ಭೇಟಿ

ಚಿಕ್ಕಮಗಳೂರು: ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಫೆ. 7 ರಂದು ಚಿಕ್ಕಮಗಳೂರಿಗೆ ಸಚಿವ ಸಂಪುಟದ ಉಪಸಮಿತಿ ಭೇಟಿ ನೀಡಲಿದೆ.

ಮೂವರು ಸಚಿವರನ್ನ ಒಳಗೊಂಡಿರುವ ಉಪಸಮಿತಿಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ, ಮುಜರಾಯಿ ಸಚಿವೆ ಶಶಿಕಲಾ ಜೋಲ್ಲೆ, ಸಚಿವ ಅಂಗಾರ ಅವರ ನೇತೃತ್ವವಿರುತ್ತದೆ. ಸ್ಥಳೀಯರು ಮತ್ತು ಸಾರ್ವಜನಿಕರಿಂದ ಲಿಖಿತ ಅಹವಾಲು ಸ್ವೀಕರಿಸಲಾಗುತ್ತದೆ. ಅರ್ಚಕರ ನೇಮಕ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿರುವುದರಿಂದ ಹಿಂದೂ ಅರ್ಚಕರ ನೇಮಕದ ಕುರಿತು ತಂಡದಿಂದ ಮಾಹಿತಿ ಸಂಗ್ರಹಿಸಲಾಗುತ್ತದೆ.

ಹಿಂದಿನ ಕಾಂಗ್ರೆಸ್ ಸರ್ಕಾರನಿವೃತ್ತಿ ಜಡ್ಜ್ ನಾಗಮೋಹನದಾಸ್ ಕಮಿಟಿಯನ್ನು ರಚನೆ ಮಾಡಿತ್ತು. ಕಮಿಟಿ ಮುಜಾವರ್ ನೇಮಕ ಸಂಬಂಧಿಸಿದಂತೆ ವರದಿಯನ್ನು ಸರ್ಕಾರಕ್ಕೆ ನೀಡಿತುಲ. ಇದನ್ನು ಪ್ರಶ್ನಿಸಿ ಹಿಂದೂಪರ ಸಂಘಟನೆಗಳಿಂದ ಹೈಕೋರ್ಟ್ ಮೊರೆ ಹೋಗಿದ್ದರಿಂದ ಸರ್ಕಾರಕ್ಕೆ ಎರಡು ಸಮುದಾಯದ ಅವಾಹಲು ಸ್ವೀಕರಿಸಲು ಹೈ ಕೋರ್ಟ್ ಆದೇಶ ನೀಡಿತ್ತು

Spread the love

Related Articles

Leave a Reply

Your email address will not be published. Required fields are marked *

Back to top button