Latestಮನರಂಜನೆಸಿನಿಮಾಸೆಲೆಬ್ರಿಟಿ

Dunia Vijay : ಶಿವಣ್ಣನ ಕಾಲಿಗೆ ಬಿದ್ದ ದುನಿಯಾ ದಂಪತಿ

ಕಳೆದ ವರ್ಷ ರಿಲೀಸ್ ಆದ ಕೆಲವೇ ಕೆಲವು ಸಿನಿಮಾಗಳಲ್ಲಿ ದುನಿಯಾ ವಿಜಯ್ ನಟನೆಯ ಸಲಗ ಸಿನಿಮಾವೂ ಒಂದು. ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿದ್ದ ಸಲಗ ಸಿನಿಮಾ ಅಭಿಮಾನಿಗಳ ಮನ ಮುಟ್ಟಿದ್ದು ನಿನ್ನೆ ಚಿತ್ರದ ನೂರನೇ ದಿನದ ಸಂಭ್ರಮವನ್ನ ಚಿತ್ರತಂಡ ಆಯೋಜಿಸಿತ್ತು. ಸಲಗನ ಸಂಭ್ರಮದಲ್ಲಿ ಸ್ಯಾಂಡಲ್​ವುಡ್​ನ ಸಾಕಷ್ಟು ಕಲಾವಿಧರು ಹಾಜರಿದ್ದರು. ಸಲಗ ಕಾರ್ಯಕ್ರಮಕ್ಕೆ ಬಂದಿದ್ದ ಶಿವಣ್ಣ ವೇದಿಕೆ ಮೇಲೆ ಬರ್ತಿದ್ದಂಗೆ ದುನಿಯಾ ವಿಜಯ್ ಹಾಗೂ ಪತ್ನಿ ಕೀರ್ತಿ ಶಿವಣ್ಣನ ಕಾಲಿಗೆ ನಮಸ್ಕರಿಸಿದ್ರು. ಅಂದ್ಹಾಗೆ ಶಿವರಾಜ್ ಕುಮಾರ್ ಎಂದರೆ ದುನಿಯಾ ವಿಜಯ್​ಗೆ ಎಲ್ಲಿಲ್ಲದ ಗೌರವ ಹಾಗೂ ಪ್ರೀತಿ. ಈ ಬಗ್ಗೆ ಪ್ರತಿಕ್ರಿಯಿಸಿದ ವಿಜಯ್ ನಾನು ಹಿರೋ ಆಗೋಕ್ಕಿಂತ ಮುಂಚಿನಿಂದಲೂ ಶಿವಣ್ಣನ ಆಶೀರ್ವಾದ ಹಾಗೂ ಬೆಂಬಲ ನಮಗೆ ಇದೆ. ಈಗ ಅವರು ನಮ್ಮ ಜೊತೆಯಲ್ಲೇ ಇದ್ದಾರೆ. ಅವರ ಹೆಸರಿಗೆ ಕೆಡುಕು ಆಗದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button