ಕೊಡಗುಜಿಲ್ಲಾ ಸುದ್ದಿ

ಗಾಂಜಾ ಮಾರಲು ಯತ್ನ : ಆರೋಪಿಗಳು ಪೊಲೀಸರ ಬಲೆಗೆ

ಕೊಡಗು : ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರು ಮಂದಿ ಯುವಕರನ್ನು ಸುಂಕದಕಟ್ಟೆ ವ್ಯಾಪ್ತಿಯಲ್ಲಿ ವಿರಾಜಪೇಟೆ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಆನಂದನಗರ ನಿವಾಸಿ ಶಫೀಕ್ (23), ವಿರಾಜಪೇಟೆಯ ಸುಣ್ಣದ ಬೀದಿ ನಿವಾಸಿ ಸೂರ್ಯ (22), ವಿರಾಜಪೇಟೆ ವಿಜಯ ನಗರದ ಕಿರಣ್ (21), ವಿರಾಜಪೇಟೆ ನೆಹರು ನಗರದ ಜೊಯಿಸನ್ (21), ವಿರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆ ರಂಜನ್ (24) ಹಾಗೂ ಸುಂಕದಕಟ್ಟೆ ದೀಕ್ಷಿತ್ (23) ಬಂಧಿತ ಆರೋಪಿಗಳು.

ಈ ಪೈಕಿ ರಂಜನ್ ಹಾಗೂ ದೀಕ್ಷಿತ್ ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿ ಬಂದವರಾಗಿದ್ದಾರೆ. ಬಂಧಿತ ಆರೋಪಿಗಳಿಂದ 350 ಅಂದಾಜು 50 ಸಾವಿರ ಮೌಲ್ಯದ 1 ಕೆ.ಜಿ. 225 ಗ್ರಾಂ ತೂಕದ ಗಾಂಜಾ ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.

ಡಿವೈಎಸ್‌ಪಿ ಸಿ.ಟಿ.ಜಯಕುಮಾರ್ ನಿರ್ದೇಶನದಲ್ಲಿ, ಸಿಪಿಐ ಬಿ.ಎಸ್ ಶ್ರೀಧರ್ ಮಾರ್ಗದರ್ಶನದಲ್ಲಿ ನಗರ ಠಾಣೆಯ ಎಸ್‌ಐ ಜಗದೀಶ್ ಧೂಳ್ ಶೆಟ್ಟಿ, ಅಪರಾಧ ವಿಭಾಗದ ಎಎಸ್‌ಐ ಮೊಹಮ್ಮದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಯಾದ ಮುಸ್ತಫಾ, ರಜನ್, ಪಿ.ಎಂ. ಮುನೀರ್, ಗಿರೀಶ್, ಧರ್ಮ, ಶೆಟ್ಟಪ್ಪ ಬಾಗೆವಾಡಿ, ಸುಬ್ರಮಣಿ, ಸತೀಶ್ ಮತ್ತು ಚಾಲಕ ರಮೇಶ್ ಭಾಗವಹಿಸಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button