Latestಜಿಲ್ಲಾ ಸುದ್ದಿತುಮಕೂರು
ಕಾಲೇಜಿಗೆ ಚಕ್ಕರ್, ಪಾರ್ಕ್ ನಲ್ಲಿ ಪ್ರೇಮಿಗಳ ಲವ್ವಿಡವ್ವಿ

ತುಮಕೂರು: ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಲವ್ ನಲ್ಲಿ ಬಿದ್ದಿರುತ್ತಾರೆ. ಇದ್ದರಿಂದ ಅದೆಷ್ಟೋ ಮಂದಿ ಜೀವನ ಸಹ ಹಾಳು ಮಾಡಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಂದು ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಕಾಲೇಜಿಗೆ ಚಕ್ಕರ್ ಹಾಕಿ ಪಾರ್ಕ್ ನಲ್ಲಿ ಖುಲಂಕುಲ್ಲಾ ಶುರು ಮಾಡಿದ್ದಾರೆ.
ಹೌದು ಕಲ್ಪತರು ನಾಡು ತುಮಕೂರಿನಲ್ಲಿ ಕಾಲೇಜಿಗೆ ಚಕ್ಕರ್ ಹಾಕಿ ಪ್ರೇಮಿಗಳು ಪಾರ್ಕ್ ನಲ್ಲಿ ತುಂಬಾ ಕ್ಲೋಸ್ ಆಗಿದ್ದಾರೆ. ಮೈಮರೆತು ಪ್ರೇಮಿಗಳು ಪಾರ್ಕ್ ನಲ್ಲೇ ಪರಸ್ಪರ ಚುಂಬಿಸುತ್ತಿದ್ದರು. ಇದನ್ನು ನೋಡಿದ ಪಾರ್ಕಿಗೆ ಬಂದ ಸಾರ್ವಜನಿಕರಿಗೆ ಇರಿಸುಮುರಿಸು ಉಂಟಾಗಿದೆ.
ನಗರದ ಮಧ್ಯ ಭಾಗದಲ್ಲಿ ಈ ಪಾರ್ಕ್ ಗೆ ಸಾಲು ಮರದ ತಿಮ್ಮಕ್ಕ ಎಂಬ ಹೆಸರಿಡಲಾಗಿದೆ. ಇದರ ಅಸುಪಾಸಿನಲ್ಲಿ ಪಿಯು ಕಾಲೇಜು ಕೂಡ ಇದೆ. ಇದೀಗ ಈ ಪಾರ್ಕ್ ಪ್ರೇಮಿಗಳ ಪಾಲಾಗಿ ಬಿಟ್ಟಿದೆ.



