ರಾಮನಗರ ಜಿಲ್ಲೆಗೆ ಸಂಸದ ಡಿ ಕೆ ಸುರೇಶ್ ಕೊಡುಗೆ ಎನು: ಹೆಚ್ ಡಿ ಕುಮಾರಸ್ವಾಮಿ
ರಾಮನಗರ: ಸಂಸದ ಡಿ.ಕೆ.ಸುರೇಶ್ ರಾಮನಗರ ಜಿಲ್ಲೆಗೆ ಕೊಟ್ಡಂತ ಕೊಡುಗೆ ಏನು.! ನನ್ನನ್ನು ಸುಳ್ಳುಗಾರ ಎನ್ನುತ್ತಾರೆ ಇವರು ಏನು ಮಾಡಿದ್ದಾರೆ. ನನ್ನ ಮೇಲೆ ಆರೋಪ ಮಾಡಿದರೆ ಸುಮ್ಮನೆ ಇರಲ್ಲ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಬಿಡದಿ ತೋಟದ ಮನೆಯಲ್ಲಿ ಅವರು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡಿಕೆ ಸುರೇಶ್ ಇವರು ಈಗ ರಾಜಕೀಯಕ್ಕೆ ಬಂದವರು. ಇವರ ರೀತಿ ಕನಕಪುರದ ಬಂಡೆ ಹೊಡೆದಿಲ್ಲ. ಪಿ ಎಮ್ ಜಿ ಎಸ್ ಯೋಜನೆ ಮೊದಲು ಇರಲಿಲ್ಲ. ನಾನು ಮೂರು ಸೇತುವೆ ನಿರ್ಮಾಣ ಮಾಡಲು ಹೊರಟಿದ್ದೆ. ನಾನು ಸಂಸದನಾಗಿ 3 ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದೆ. ನಂತರ ಗ್ರಾಮ ಸಡಕ್ ಯೋಜನೆ ಬಂತು. ಬಳಿಕ ವಾಜಪೇಯಿ ಅವಧಿಯಲ್ಲಿ ಪಿ ಎಮ್ ಜಿ ಎಸ್ ಯೋಜನೆ ಆಯ್ತು. ಈ ಯೋಜನೆ ತಂದ ಕೀರ್ತಿಗೆ ದೇವೇಗೌಡರಿಗೆ ಸಲ್ಲಬೇಕು. ಯಾರೋ ಮಾಡಿದಕ್ಕೆ ಹೆಸರು ಹಾಕಿಕೊಳ್ಳಲು ಇವರು ಬರ್ತಾರೆ ಎಂದು ವಾಗ್ಧಾಳಿ ನಡೆಸಿದರು.
ಇನ್ನು ರಾಮನಗರದ ಕೈಲಂಚ ಗ್ರಾಮದಲ್ಲಿನ ತೆಂಗಿನಕಲ್ಲು ಕೆರೆ ಭರ್ತಿ ವಿಚಾರಕ್ಕೆ ಸಂಬಂಧಿಸಿದಂತೆ, ಡಿಪಿಆರ್ ಬಗ್ಗೆ ತಿಳಿದುಕೊಂಡು ಪತ್ರ ಬರೆದಿದ್ದಾರೆ. ಅಷ್ಟರಲ್ಲಿ ಕೆರೆ ತುಂಬಿಸಲು ಎಲ್ಲ ಕೆಲಸ ಆಗಿತ್ತು. ಈಗ ತೆಂಗಿನಕಲ್ಲು ಕೆರೆ ಕಾರ್ಯಕ್ರಮ ಮಾಡುತ್ತಿದ್ದಾರೆ. ನೀವು ಏನು ಡಾಕ್ಯುಮೆಂಟ್ ಬಿಡುಗಡೆ ಮಾಡೋದು ನನ್ನ ಬಳಿ ಎಲ್ಲಾ ದಾಖಲೆಗಳು ಇವೆ. ನಾನು ಸಿಎಂ ಆಗಿದ್ದಾಗ ಕೆರೆ ಬರ್ತಿಗೆ ಹಣ ನೀಡಿದ್ದೇ. ತೆಂಗಿನಕಲ್ಲು ಕೆರೆ ಭರ್ತಿಗೆ ಹಣ ಬಿಡುಗಡೆ ಮಾಡಿದ್ದೆ. 16 ಕೋಟಿ ಹಣ ಬಿಡುಗಡೆ ಮಾಡಿದ್ದೇ ನಾನು. ಈಗ ಬಂದು ರಾಜಕಾರಣ ಮಾಡುತ್ತಿದ್ದಾರೆ.
ರಾಮನಗರದಲ್ಲಿ ಸುಳ್ಳು ಹೇಳಿ ರಾಜಕೀಯ ಮಾಡಲು ಆಗಲ್ಲ. ಎಂಪಿ ಗ್ರ್ಯಾಂಟ್ ಎಷ್ಟು ಬಿಡುಗಡೆ ಮಾಡಿದ್ದಾರೆ. ಕೇವಲ ಚಿತಾಗಾರದ ಮುಂದೆ ಫೋಟೋ ತೆಗೆಸಿಕೊಳ್ತಾರೆ. ಜನರನ್ನು ಸಾಯಿಸಿ ಅವರಿಗೆ ಬೆಂಕಿ ಇಡಲು ಬಂದಿದ್ದಾರೆ. ಇವರ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು ಎಂದರು.
ಹಾಗೆಯೇ ಹಾರೋಹಳ್ಳಿ ತಾಲೂಕು ಕೇಂದ್ರ ಮಾಡಿದ್ದೇನೆ. ಇವರ ಕಾಟ ತಪ್ಪಿಸಲು ತಾಲೂಕು ಕೇಂದ್ರ ಮಾಡಿದ್ದೇನೆ. ಇವರ ಜೊತೆ ಇರುವ ಎಂಎಲ್ಸಿಯಂತೆ ದಲ್ಲಾಳಿ ಕೆಲಸ ಮಾಡಲ್ಲ. ಐದು ವರ್ಷ ಕಾಂಗ್ರೆಸ್ ಸರ್ಕಾರ ಇತ್ತಲ್ಲ. ಆಗ ಏಕೆ ಯಾವುದೇ ಯೋಜನೆ ಮಾಡಲಿಲ್ಲ ಎಂದು ಟಾಂಗ್ ಕೊಟ್ಟರು.
ಸಿದ್ದರಾಮಯ್ಯ ಹೇಳಲ್ವ ಮೇಕೆದಾಟು ಡಿಪಿಆರ್ ಬಗ್ಗೆ. ಡಿಪಿಆರ್ ಬಗ್ಗೆ ನಾನು ಮಾಡಿದ್ದು ಈ ಬಗ್ಗೆ ಅಸೆಂಬ್ಲಿಯಲ್ಲಿ ಮಾತನಾಡುತ್ತೇನೆ. ಇವರ ರೀತಿ ಸುಳ್ಳು ಹೇಳಲು ಹೋಗಲ್ಲ. ಈಗ ನಮ್ಮ ನೀರು ನಮ್ಮ ಹಕ್ಕು ಅಂತಾರೆ. ಕೋವಿಡ್ ಸಮಯದಲ್ಲಿ ಪಾದಯಾತ್ರೆ ಹೊರಟಿದ್ದರು ಎಂದರು. ಇದಲ್ಲದೆ ರಾಮನಗರ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಇವರಿಂದ ಕಲಿಯಬೇಕಿಲ್ಲ. ಜಿಲ್ಲಾಸ್ಪತ್ರೆ ಬಸವನಪುರಕ್ಕೆ ತೆಗೆದುಕೊಂಡು ಹೊರಟಿದ್ದರು ಎಂದು ಸಂಸದ ಡಿ.ಕೆ.ಸುರೇಶ್ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದರು.
ರಾಜೀವ್ ವಿವಿ ಹಾಗೂ ನೂತನ ಜಿಲ್ಲಾಸ್ಪತ್ರೆ ನನ್ನ ಕನಸಿನ ಕೂಸು ಎಂದು ಸಚಿವ ಅಶ್ವಥ್ ನಾರಾಯಣ್ ಗೂ ಟಾಂಗ್ ಕೊಟ್ಟ ಹೆಚ್ಡಿಕೆ, ವೇದಿಕೆ ಮೇಲೆ ಸಚಿವರು ಭಾಷಣ ಬಿಗಿದ್ದಿದ್ದರಲ್ಲ. ಈಗ ಈ ಎರಡು ಯೋಜನೆ ಜಾರಿಗೊಳಿಸಲಿ. ನನ್ನ ಕನಸಿನ ಯೋಜನೆ ಸಾಕಾರಗೊಳಿಸಲಿ ಎಂದು ವಾಗ್ಧಾಳಿ ನಡೆಸಿದರು. ಮಾಗಡಿ ಶಾಸಕ ಎ. ಮಂಜುನಾಥ್ ಮುಂತಾದವರು ಹಾಜರಿದ್ದರು.
