ಪೆಗಾಸಿಸ್ ಸ್ಪೈ ವೇರ್ ಖರಿದೀಗೂ ಇದು ಸಕಾಲ: ಚಿದು ಲೇವಡಿ

ನವದೆಹಲಿ: ಮುಂದಿನ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಮುನ್ನವೇ ಇಸ್ರೇಲ್ ನಿಂದ ಪೆಗಾಸಿಸ್ ಸ್ಪೈ ವೇರ್ ಅನ್ನು ಕೇಂದ್ರ ಸರ್ಕಾರ ಎರಡು ಬಾರಿ ಖರೀದಿಸಬಹುದು ಎಂಬ ಆತಂಕವನ್ನು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಹೊರಹಾಕಿದ್ದಾರೆ. ಭಾರತ-ಇಸ್ರೇಲ್ ಹೊಸ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳಲು ಇದು ಅತ್ಯಂತ ಉತ್ತಮ ಕಾಲ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಚಿದಂಬರಂ, ಪೆಗಾಸಸ್ ಸ್ಪೈವೇರ್ ಮುಂದುವರೆದ ಆವೃತ್ತಿ ಇಸ್ರೇಲ್ ಬಳಿ ಇದ್ದರೆ, ಅದರ ವಿಚಾರಣೆ ಮತ್ತು ಮಾತುಕತೆಗೂ ಇದೇ ಅತ್ಯುತ್ತಮ ಸಮಯ ಎಂದು ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದಾರೆ.
2017 ರಲ್ಲಿ ಸುಮಾರು 200 ಕೋಟಿ ರೂಪಾಯಿಗೆ ಸ್ಪೈವೇರ್ ಗಳನ್ನು ಇಸ್ರೇಲ್ ನಿಂದ ಭಾರತ ಖರೀದಿ ಮಾಡಿತ್ತು ಎಂದು ಅಮೆರಿಕಾದ ಪ್ರಸಿದ್ಧ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು.
ಈಗಲೂ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆದ್ದು ಅಧಿಕಾರ ಹಿಡಿಯಬೇಕು ಎಂಬ ಲೆಕ್ಕಾಚಾರದಂತೆ ಬಿಜೆಪಿ, ಮೋದಿ ಲೋಕಸಭಾ ಚುನಾವಣೆಗೂ ಮುನ್ನವೇ ಇಸ್ರೇಲ್ ನಿಂದ ಸುಧಾರಿತ ಸ್ಪೈವೇರ್ ಖರೀದಿ ಮಾಡಬಹುದು ಎಂದು ಚಿದು ಲೇವಡಿಮಾಡಿದ್ದಾರೆ.
