Crime news: ಧಾರವಾಡದಲ್ಲಿ ಕೆರೆಯಲ್ಲಿ ಮುಳುಗಿ ಇಬ್ಬರ ಸಾವು

ಹುಬ್ಬಳ್ಳಿ: ಕೆರೆಗೆ ಈಜಲು ಹೋಗಿ ಮುಳುಗುತ್ತಿದ್ದ ಯುವಕ ಹಾಗೂ ಯುವಕನ ರಕ್ಷಣೆ ಮುಂದಾಗಿದ್ದ ವ್ಯಕ್ತಿ ಸೇರಿ ಇಬ್ಬರು ನೀರಿನಲ್ಲಿ ಮುಳುಗಿ ಧಾರುಣವಾಗಿ ಸಾವನಪ್ಪಿರುವ ಘಟನೆ ಧಾರವಾಡ ತಾಲೂಕಿನ ಮುಗದ ಗ್ರಾಮದಲ್ಲಿ ನಡೆದಿದೆ.
ಧಾರವಾಡದ ನಿವಾಸಿ ಉಮೇಶ್ (19) ಹಾಗೂ ಮುಗದ ಗ್ರಾಮದ ನಿವಾಸಿ ವಿಠಲ್ ಹೊಸಮನಿ (40) ಮೃತ ದುರ್ದೈವಿಗಳಾಗಿದ್ದಾರೆ. ತಾಲೂಕಿನ ಮುಗದ ಹೊನ್ನಮ್ಮ ಕೆರೆಗೆ, ಧಾರವಾಡ ಯುವಕ ಉಮೇಶ ಈಜಿಕೊಂಡು ಸ್ನಾನ ಮಾಡಲು ಮುಂದಾಗಿದ್ದಾನೆ. ಆರಂಭದಲ್ಲಿ ದಡದಲ್ಲಿ ಸ್ನಾನ ಮಾಡುತ್ತಿದ್ದ ಯುವಕ ಕೆಲ ಸಮಯದ ನಂತರ ಒಳಗೆ ಹೋಗಿದ್ದಾನೆ. ಆದರೆ ಮರಳಿ ಬರಲಾಗದೆ ಉಮೇಶ್ ನೀರಿನಲ್ಲಿ ಮುಳುಗಲಾರಂಭಿಸಿದ್ದಾನೆ. ಇದನ್ನು ಹತ್ತರದಲ್ಲಿದ್ದ ವಿಠಲ್ ಹೊಸಮನಿ ಗಮನಿಸಿ, ತಕ್ಷಣವೇ ಕೆರೆಗೆ ಹಾರಿ ಯುವಕನ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಇಬ್ಬರು ನೀರಿನಿಂದ ಹೊರಗಡೆ ಬರಲಾಗದೆ ಸಾವನಪ್ಪಿದ್ದಾರೆ.
ಇನ್ನೂ ಘಟನೆಯ ಕುರಿತು ಗ್ರಾಮಸ್ಥರು ಮಾಹಿತಿ ಮೇರೆಗೆ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ, ಇಬ್ಬರು ಮೃತ ದೇಹಗಳನ್ನು ಗ್ರಾಮಸ್ಥರ ಸಹಕಾರದೊಂದಿಗೆ ಹೊರಗಡೆ ತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
