Breaking NewsLatestಜಿಲ್ಲಾ ಸುದ್ದಿಮೈಸೂರುಸುದ್ದಿ
ಶಕ್ತಿಧಾಮದ ಮಕ್ಕಳಿಗೆ ಬಾಡೂಟ ಬಡಿಸಿದ ನಟ ಶಿವರಾಜ್ ಕುಮಾರ್

ಮೈಸೂರು: ನಟ ಶಿವರಾಜ್ ಕುಮಾರ್ ಅಭಿನಯದ ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ಆದರೂ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದರೂ ಕೆಲಸದ ನಡುವೆ ನಟ ಶಿವಣ್ಣ ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳಿಗೆ ಬಾಡೂಟ ಬಡಿಸಿದ್ದಾರೆ.
ಮೈಸೂರಿನ ದೊನ್ನೆ ಬಿರಿಯಾನಿ ಪ್ಯಾಲೇಸ್ ವತಿಯಿಂದ ಸಚಿನ್ ಗೌಡ ಎನ್ನುವವರು ಶಕ್ತಿಧಾಮದ ಮಕ್ಕಳಿಗೆ ಬಿರಿಯಾನಿ ಹಾಗೂ ಕಬಾಬ್ ಊಟ ಹಂಚಿದ್ದಾರೆ. ಈ ವೇಳೆ ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಸ್ವತಃ ತಮ್ಮ ಕೈಯಾರೆ ಮಕ್ಕಳಿಗೆ ಊಟ ಬಿಡಿಸಿ ಖುಷಿ ಪಟ್ಟಿದ್ದಾರೆ.
ಇನ್ನು ಶಿವಣ್ಣ ಈ ಬಾರಿಯ ಗಣರಾಜ್ಯೋತ್ಸವವನ್ನು ಸಹ ಶಕ್ತಿಧಾಮದಲ್ಲೇ ಆಚರಿಸಿದ್ದರು. ಅಲ್ಲದೇ ಶಕ್ತಿಧಾಮದ ಮಿನಿಬಸ್ಗೆ ತಾವೇ ಡ್ರೈವರ್ ಆಗಿ ಮಕ್ಕಳ ಜೊತೆ ಜಾಲಿರೈಡ್ ಮಾಡಿದ್ದರು.
