
ಊ ಅಂತಿಯಾ ಮಾವ ಊಊ ಅಂತಿಯಾ ಮಾವ ಹಾಡಿನ ಮೂಲಕ ಸಮಂತಾ ಸಖತ್ ಮೋಡಿ ಮಾಡಿದ್ದರು. ಎಲ್ಲ ಬಾಯಿನಲ್ಲೂ ಗುನುಗುವ ಹಾಡಿಗೆ ಸಖತ್ ಆಗಿ ಸೊಂಟ ಬಳುಕಿಸಿ ಸಮಂತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು.
ನಾಗಚೈತನ್ಯ ಜೊತೆ ವಿಚ್ಚೇದನ ಆದ ನಂತರ ಸಮಂತಾ ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆಯಾಗಿ ಌಕ್ಟಿವ್ ಆಗಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾ ಮೂಲಕ ಗ್ರ್ಯಾಂಡ್ ಆಗಿ ಎಂಟ್ರಿಕೊಟ್ಟಿದ್ದು, ಐಟಂ ಸಾಂಗ್ ನಿಂದ ಎಲ್ಲರ ಮನಗೆದ್ದಿದ್ದಾರೆ.
ಚಿತ್ರರಂಗದಲ್ಲಿ ಸಖತ್ ಡಿಮ್ಯಾಂಡ್ ಇರುವ ಅವರಿಗೆ ಮದುವೆ ನಂತರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ತೀರಾ ಕಡಿಮೆ. ಆದರೆ ಸಣ್ಣ ವಿಷಯಕ್ಕೆ ಡಿವೋರ್ಸ್ ಆದ ತಕ್ಷಣವೇ ಅಲ್ಲಿಂದ ಮತ್ತೆ ಸಿನಿಮಾದ ಜರ್ನಿ ಶುರು ಮಾಡಿದ್ದಾರೆ. ಅವರು ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಕೊಳ್ಳುವುದರ ಜೊತೆಗೆ ಐಟಂ ಸಾಂಗ್ ನಲ್ಲಿಯೂ ತೊಡಗಿಕೊಳ್ಳುತ್ತಿದ್ದಾರೆ.
ಇದೀಗ ಸಮಂತಾ ಮತ್ತೆ ಪಡ್ಡೆಹುಡುಗರ ಹೃದಯ ಕದಿಯೋಕೆ ರೆಡಿಯಾಗಿದ್ದಾರೆ. ಯಾಕಂದರೆ ಅವರು ಮತ್ತೊಂದು ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ವಿಜಯ್ ದೇವರಕೊಂಡ ನಟಿಸಿರುವ ಪ್ಯಾನ್ ಇಂಡಿಯಾದ ಲೈಗರ್ ಸಿನಿಮಾದಲ್ಲಿ ಅವರಿಗೆ ಆಫರ್ ಬಂದಿದೆಯಂತೆ.ಇನ್ನು ಸಮಂತಾ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಒಂದು ವೇಳೆ ಸಮಂತಾ ಒಕೆ ಅಂದರೆ ಸಾಕು ಆ ಚಿತ್ರಕ್ಕೆ ಮತ್ತಷ್ಟು ಮೆರಗು ಸಿಗಲಿದೆ.

ಲೈಗರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪೂರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದು, ಚಾರ್ಮಿ ಅವರು ಬಂಡವಾಳ ಹೂಡಲಿದ್ದಾರೆ.




