ಜಿಲ್ಲಾ ಸುದ್ದಿಮೈಸೂರು

ರಸ್ತೆಗುಂಡಿ ಮುಚ್ಚುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು: ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಅಪಘಾತಕ್ಕೆ ಕಾರಣವಾಗುತ್ತಿದೆ ನಗರಪಾಲಿಕೆ ಅಧಿಕಾರಿಗಳೇ ಕಾರಣ‌ ಎಂದು ಪಾಲಿಕೆ ವಿರುದ್ಧ ಮೈಸೂರು ಪ್ರಜ್ಞಾವಂತ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಕೃಷ್ಣಮೂರ್ತಿಪುರಂನ ರಾಮಮಂದಿರ ಮುಂಭಾಗ ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಘಾತವಾಗುತ್ತಿದೆ ಎಂದು ಪಾಲಿಕೆ ವಿರುದ್ಧ ವಿವಿಧ ಘೋಷಣೆ ಕೂಗಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕಾಂತರಾಜ ರಸ್ತೆ ರಾಮಮಂದಿರ ಮುಂಭಾಗ ಭಾನುವಾರ ರಾತ್ರಿ ರಸ್ತೆ ಹಳ್ಳ ಗುಂಡಿಯ ದುಸ್ಥಿತಿಯಿಂದ ಚಾಲನೆ ತಪ್ಪಿ ಸಾವನಪ್ಪಿದ್ದ ದರ್ಶನ್ ಕುಮಾರ್ ನಿಧನ ಹೊಂದಿದ್ದನು. ಗುಂಡಿ ರಸ್ತೆ ದುರಸ್ಥಿ ಡಾಂಬಾರೀಕರಣ ಮಾಡದ ನಿರ್ಲಕ್ಷ್ಯಕ್ಕೆ ನಗರಪಾಲಿಕೆ ದುರಾಡಳಿತ ಕಾರಣ ಎಂದು ಆರೋಪಿಸಿದರು.

ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ ಮಾತನಾಡಿ, ಕಳೆದ ಎರಡು ಮೂರು ವರ್ಷಗಳಿಂದ ಮೈಸೂರು ನಗರದ ಬಹುತೇಕ ಮುಖ್ಯ ರಸ್ತೆಗಳು ಡಾಂಬರೀಕರಣ ಭಾಗ್ಯ ಕಂಡಿಲ್ಲ. ಇದರಿಂದಾಗಿ ರಸ್ತೆ ಅಫಘಾತದಲ್ಲಿ ಹಿರಿಯ ನಾಗರೀಕರು ಮಹಿಳೆಯರು ಬಿದ್ದು ಅಪಘಾತ ಮಾಡಿಕೊಳ್ಳುವವರ ಸಂಖ್ಯೆ ದಿನೆದಿನೇ ಹೆಚ್ಚುತ್ತಿದೆ.

ಹಳ್ಳಕೊಳ್ಳಗಳ ರಸ್ತೆ, ವಾಹನ ಸಂಚಾರ ಹೆಚ್ಚಿರುವ ಮುಖ್ಯ ರಸ್ತೆಗಳಲ್ಲಿ ಸುಗಮ ಸಂಚಾರ ರಸ್ತೆ ಸುರಕ್ಷತೆಯ ಬಗ್ಗೆ ಗಮನ ನೀಡದ ನಗರಪಾಲಿಕೆ ಬೇಸರದ ಸಂಗತಿಯಾಗಿದೆ. ಕೇವಲ ಸಿಸಿ ಕ್ಯಾಮರಾದಲ್ಲಿ ಹೆಲ್ಮೆಟ್ ದಂಡ ನೋಪಾರ್ಕಿಂಗ್ ದಂಡ ವಿಧಿಸುವ ಅಧಿಕಾರಿಗಳಿಗೆ ರಸ್ತೆ ಗುಂಡಿ ಹಳ್ಳಕೊಳ್ಳಗಳು ಅದರಿಂದಾದ ಅಪಘಾತಗಳ ಬಗ್ಗೆ ಅರಿವಿಲ್ಲವೇ. ಈಗಲಾದರೂ ಎಚ್ಚೆತ್ತು, ಪಾಲಿಕೆ ಅಧಿಕಾರಿಗಳು ರಸ್ತೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button