
ನವದೆಹಲಿ: ಮುಂದಿನ ಒಂದು ವಾರದಿಂದ 7 ವಾರಗಳವರೆಗೆ ಪ್ರಧಾನಿ ನರೇಂದ್ರ ಮೋದಿ ಅನೇಕ ರಾಜಕೀಯ ಕಠಿಣ ಸವಾಲು ಎದುರಿಸಬೇಕಿದೆ. ಅವುಗಳನ್ನು ಹೇಗೆ ಮತ್ತು ಯಾವ ರೀತಿ ನಿಭಾಯಿಸಿ ಅದರಲ್ಲಿ ಯಶಸ್ವಿಯಾಗುತ್ತಾರೆ ಎಂಬುದರ ಆಧಾರದ ಮೇಲೆ ಅವರ ರಾಜಕೀಯ ಭವಿಷ್ಯ, ಮತ್ತು ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಪ್ರಯತ್ನಕ್ಕೆ ಚಾಲನೆ ಸಿಗಬಹುದು ಎನ್ನಲಾಗಿದೆ.
ಮೂರು ಕಠಿಣ ಸವಾಲುಗಳು, ಮೊದಲನೇಯದಾಗಿ ಫೆಬ್ರವರಿ ಒಂದರಂದು ಕೇಂದ್ರ ಬಜೆಟ್ ಮಂಡನೆ ಮಾಡಿ ಅದರಲ್ಲಿ ಅವರು ಸೈ ಎನಿಸಿಕೊಳ್ಳಬೇಕು.
ಎರಡನೇ ಸವಾಲೆಂದರೆ ಪಂಚರಾಜ್ಯಗಳ ಫಲಿತಾಂಶ ಏನಾಗಲಿದೆ ಎಂಬುದು ಮತ್ತೊಂದು ಕುತೂಹಲ ಸಂಗತಿಯಾಗಿದೆ. ಒಂದು ವೇಳೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಿಜೆಪಿ ಮತ್ತು ಮೋದಿ ಪಾಲಿಗೆ ಆಶಾದಾಯಕವಾಗಿ ಹೊರಹೊಮ್ಮದಿದ್ದರೆ ಮೂರನೇ ಭಾರಿಗೆ ಅಧಿಕಾರ ಹಿಡಿಯಬೇಕೆಂಬ ಮೋದಿ ಕನಸು ನನಾಸಾಗುವುದು ಬಹಳ ಕಷ್ಟ. ಜೊತೆಗೆ ದೊಡ್ಡ ಹೊಡೆತ.
ಮತ್ತೊಂದು ಕಠಿಣ ಸವಾಲು ಎಂದರೆ ಈ ವರ್ಷದ ಕೊನೆ ವೇಳೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ಅಧಿಕಾರವಧಿ ಮುಕ್ತಾಯಗೊಳ್ಳಲಿದೆ, ಯಾರನ್ನು ಹೊಸ ರಾಷ್ಟ್ರಪತಿ, ಹಾಗೂ ಉಪರಾಷ್ಟ್ರಪತಿ ಮಾಡಬೇಕು ಎಂಬುದು ಕೂಡ ಮೋದಿಯವರ ಪಾಲಿಗೆ ಅತ್ಯಂತ ಮಹತ್ವದ ಘಟನೆಯಾಗಲಿದೆ.
ಬರುವ ಜುಲೈ 24ರಂದು ರಾಷ್ಟ್ರಪತಿ ರಾಮನಾಥ್ ಗೋವಿಂದ್ ಅವರ ಅಧಿಕಾರ ಹಾಗೂ. ಆಗಸ್ಟ್ 10ರಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ 5 ವರ್ಷಗಳ ಅಧಿಕಾರವಧಿ ಕೊನೆಯಾಗಲಿದೆ. ಸದ್ಯದ ಮಾಹಿತಿ ಪ್ರಕಾರ ಇಬ್ಬರನ್ನು ಮತ್ತೊಂದು ಅವಧಿಗೆ ಮುಂದುವರಿಸುವ ಸಾಧ್ಯತೆಗಳಿಲ್ಲ.
ದಕ್ಷಿಣ ಭಾರತಕ್ಕೆ ರಾಷ್ಟ್ರಪತಿ ಪಟ್ಟ ?
ದಕ್ಷಿಣ ಭಾರತದವರಿಗೆ ಮುಂದಿನ ರಾಷ್ಟ್ರಪತಿ ಪಟ್ಟ ಕಟ್ಟಲು ಮೋದಿಯವರು ತೀವ್ರ ಆಸಕ್ತಿ ಹೊಂದಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಹೀಗಾಗಿ ದಕ್ಷಿಣ ರಾಜ್ಯಗಳ ಯಾವುದಾದರೂ ರಾಜ್ಯಪಾಲರಿಗೆ ಮುಂದಿನ ರಾಷ್ಟ್ರಪತಿ ಆಗುವ ಸುಯೋಗ ಲಭಿಸಬಹುದು ಎಂಬ ಮಾತು ಬಿಜೆಪಿ ಪಾಳೆಯದಲ್ಲಿ ಹರಿದಾಡುತ್ತಿದೆ.
