ಮನರಂಜನೆಸಿನಿಮಾ

ಮದುವೆಗೆ ರೆಡಿಯಾಗಿರುವ ನಟಿ ಶುಭ್ರಾ ಅಯ್ಯಪ್ಪ, ಹುಡುಗ ಯಾರು ಗೊತ್ತಾ?

ನಟ ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಸಿನಿಮಾದ ಶುಭ್ರಾ ಅಯ್ಯಪ್ಪ ನಟಸಿ ಅಭಿಮಾನಿಗಳಿಂದ ಸೈ ಎನಿಸಿಕೊಂಡಿದ್ದರು. ನಂತರ ಇನ್ನೂ ಎರಡು ಕನ್ನಡ ಚಿತ್ರಗಳಲ್ಲಿ ನಟಿಸಿದ್ದು, ಬಿಡುಗಡೆಯ ಹಂತದಲ್ಲಿ ಇದೆ. ಆದರೆ ಇದೀಗ ಅವರ ಕಡೆಯಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಹೌದು ಶುಭ್ರಾ ಅಯ್ಯಪ್ಪ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ವಜ್ರಕಾಯ ಸಿನಿಮಾ ನಂತರ ತುಂಬಾ ಗ್ಯಾಪ್ ನಲ್ಲಿ ಯಾವ ಸಿನಿಮಾ ಬಿಡುಗಡೆಯಾಗಿಲ್ಲ. ಹೀಗಾಗಿ ಅಭಿಮಾನಿಗಳಿಗೆ ಯಾವುದೆ ಮಾಹಿತಿ ಸಿಗುತ್ತಿರಲಿಲ್ಲ. ಇದೀಗ ಅವರು ಸದ್ಯ ಸುದ್ದಿಯಲ್ಲಿದ್ದಾರೆ.

ನಟಿ ಶುಭ್ರಾ ಅಯ್ಯಪ್ಪ ಅವರು ಮದುವೆ ಆಗಲು ರೆಡಿಯಾಗಿದ್ದಾರೆ. ಅವರ ಸಿನಿಮಾಗಳ ತುಂಬಾ ಕಡಿಮೆಯಾದ್ರೂ ಕೂಡ ಸಿನಿಮಾಗಿಂತಲೂ ಅವರು ಮಾಡಲಿಂಗ್ ಪ್ರಪಂಚದಲ್ಲಿ ಹೆಚ್ಚು ಸಕ್ರಿಯರಾಗಿದ್ದರು.

ಸಾಮಾಜಿಕ ಜಾಲತಾಣದ ಮೂಲಕ ಶುಭ್ರಾ ಅಯ್ಯಪ್ಪ ಅವರು ತಮ್ಮ ಮದುವೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಹುಡುಗನ ಪ್ರೀತಿಯನ್ನು ಒಪ್ಪಿಕೊಂಡಿರುವುದಾಗಿ ಶುಭ್ರಾ ಅಯ್ಯಪ್ಪ ಅವರು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ

ನಟಿ ಶುಭ್ರಾ ಅಯ್ಯಪ್ಪ ಅವರು ತಾನು ಮದುವೆ ಆಗುವ ಹುಡುಗನ ಫೋಟೊ ಹಂಚಿಕೊಂಡಿದ್ದಾರೆ. ಈ ಮೂಲಕ ಅವರ ಪರಿಚಯ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಅಭಿಮಾನಿಗಳು ಇದೀಗ ಅವರಿಗೆ ಕಾಮೆಂಟ್ ಮಾಡಿ ಮದುವೆ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಈ ಬಗ್ಗೆ ಶುಭ್ರಾ ಅವರು ಸ್ಪಷ್ಟ ಪಡಿಸಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button