Breaking NewsLatestರಾಷ್ಟ್ರೀಯಸುದ್ದಿ
ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿ ಪ್ರದಾನ

ನವದೆಹಲಿ: ದೇಶದ ಅಭಿವೃದ್ಧಿಗೆ ಯಾವ ರೀತಿ ಕೆಲಸ ಮಾಡಬೇಕು, ಯಾವ ರೀತಿ ಕೊಡುಗೆ ನೀಡಬೇಕು ಎಂಬುದರ ಬಗ್ಗೆಯಾ ಮಕ್ಕಳು ಚಿಂತನೆಯಿರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದೆಹಲಿಯಲ್ಲಿ ವರ್ಚುವಲ್ ಮಾಧ್ಯಮದ ಮೂಲಕ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಇಂದಿನ ಮಕ್ಕಳೇ, ನಾಳಿನ ಭಾರತದ ಭವಿಷ್ಯದ ರೂವಾರಿಗಳು, ಹೀಗಾಗಿ ದೇಶದ ಅಭಿವೃದ್ಧಿಗೆ ಯಾವ ರೀತಿ ಕೆಲಸ ಮಾಡಬೇಕು ಎಂಬ ಚಿಂತನೆಯೊಂದಿಗೆ ಮುಂದುವರಿಯ ಬೇಕೆಂದರು.
14 ಬಾಲಕಿಯರು ಸೇರಿದಂತೆ 29 ಮಕ್ಕಳಿಗೆ ರಾಷ್ಟ್ರಿಯ ಬಾಲ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬಾಲ ಪುರಸ್ಕಾರ್ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರತಿಯೊಬ್ಬ ಬಾಲಕಿಗೂ ಒಂದು ಲಕ್ಷ ರೂಪಾಯಿ ನಗದು ಮತ್ತು ಪ್ರಶಂಸಾಪತ್ರ ನೀಡಲಾಗಿದೆ. ಇದೆ ಸಂದರ್ಭದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಪ್ರಧಾನಿ ಶುಭ ಹಾರೈಸಿದರು.
