Breaking NewsLatestಆರೋಗ್ಯರಾಷ್ಟ್ರೀಯಸುದ್ದಿ

ಜಗತ್ತಿನಾದ್ಯಂತ 55 ಲಕ್ಷ ಜನರನ್ನು ಅಪೋಶನ ಮಾಡಿದ ಕೋವಿಡ್

ನ್ಯೂಯಾರ್ಕ್: ವಿಶ್ವಾದ್ಯಂತ ಕೊರೋನಾ ಪ್ರಕರಣಗಳ ಸಂಖ್ಯೆ 35 ಕೋಟಿಗೂ ಹೆಚ್ಚಾಗಿದೆಯೆಂದು ಅಮೆರಿಕಾದ  ಜಾನ್ ಹ್ಯಾಪ್ಕಿನ್  ವಿಶ್ವವಿದ್ಯಾಲಯದ ಇತ್ತೀಚಿನ ಅಂಕಿ-ಅಂಶಗಳು ಬಹಿರಂಗಪಡಿಸಿವೆ.  ಈ ವರೆಗೆ  ಜಾಗತಿಕ ಮಟ್ಟದಲ್ಲಿ ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟವರ ಸಂಖ್ಯೆ 55 ಲಕ್ಷಕ್ಕೆ ಏರಿಕೆಯಾಗಿದೆ . ಜಾಗತಿಕ ಲಸಿಕಾ ಅಭಿಯಾನದ ಅಂಗವಾಗಿ ಈವರೆಗೆ  ಜಗತ್ತಿನಾದ್ಯಂತ 900 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ.

ಜಗತ್ತಿನ ರಾಷ್ಟ್ರಗಳ ಅತಿ   ಹೆಚ್ಚು ತೊಂದರೆಗೊಳಗಾದ ದೇಶಗಳ ಪೈಕಿ ವಿಶ್ವದ  ದೊಡ್ಡಣ್ಣ ಅಮೆರಿಕವೇ  ಮೊದಲ ಸ್ಥಾನದಲ್ಲಿದೆ. ಸೋಂಕು  ಮತ್ತು ಸಾವಿನ ಸಂಖ್ಯೆ ಎರಡಲ್ಲೂ ಅಮೆರಿಕವೇ ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನದಲ್ಲಿದೆ.

 ಈವರೆಗೂ  7 ಕೋಟಿಗೂ ಹೆಚ್ಚು ಜನಸೋಂಕಿಗೆ ಒಳಗಾಗಿದ್ದು ಚಿಕಿತ್ಸೆ  ಫಲಕಾರಿಯಾಗದೇ   ಮೃತಪಟ್ಟವರ ಸಂಖ್ಯೆ 8 ಲಕ್ಷ ದಾಟಿದೆ  ಎಂದೂ ವಿಶ್ವವಿದ್ಯಾಲಯದ ವರದಿ ಹೇಳಿದೆ.

Spread the love

Related Articles

Leave a Reply

Your email address will not be published. Required fields are marked *

Back to top button