ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಕೋರ್ಟ್ ಮೆಟ್ಟಿಲೇರಿದ ಸಲ್ಮಾನ್ ಖಾನ್

ನಟ ಸಲ್ಮಾನ್ ಖಾನ್ ಕೋಪಗೊಳ್ಳುವುದು ಹೊಸದೇನು ಅಲ್ಲ. ಆಗಾಗ ಸ್ಟೇಜ್ ಮೇಲೆ ಗರಂ ಆಗ್ತಾನೆ ಇರ್ತಾರೆ. ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವಾಗ ಕೆಂಡಮಂಡಲವಾಗಿರೋ ಆನೇಕ ಉದಾಹರಣೆಗಳಿವೆ. ಇದೀಗ ಸಲ್ಮಾನ್ ತಮ್ಮ ಪಕ್ಕದ ಮನೆಯವರ ಜೊತೆ ಜಗಳ ಮಾಡಿಕೊಂಡು ಕೋರ್ಟ್ ಮೆಟ್ಟಿಲೇರಿದ್ದಾರೆ.
ಸಲ್ಮಾನ್ ಖಾನ್ ತಂದೆ ಮುಸ್ಲಿಂ, ತಾಯಿ ಹಿಂದೂ. ಹಾಗಾಗಿ ಸಲ್ಮಾನ್ ಖಾನ್ ಮನೆಯಲ್ಲಿ ಎರಡು ಧರ್ಮವನ್ನ ಆಚರಣೆ ಮಾಡಲಾಗುತ್ತೆ. ಆದರೆ ಸಲ್ಮಾನ್ ಖಾನ್ ಪನ್ವೇಲ್ ಫಾರ್ಮ್ ಹೌಸ್ ನ ನೆರಹೊರೆಯವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದು ಸಲ್ಮಾನ್ ಖಾನ್ ಗೆ ಕೋಪ ತರಿಸಿದ್ದು ಹೀಗಾಗಿ ಅವರು ನೇರವಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮುಂಬೈನ ಹೊರ ವಲಯದ ಪನ್ವೇಲ್ ನಲ್ಲಿ ಸಲ್ಮಾನ್ ಖಾನ್ ಫಾರ್ಮ್ ಹೌಸ್ ಹೊಂದಿದ್ದಾರೆ. ಶೂಟಿಂಗ್ ಇಲ್ಲದಿರುವ ವೇಳೆ ಹೆಚ್ಚಿನ ಸಮಯವನ್ನ ಸಲ್ಮಾನ್ ಅಲ್ಲಿಯೇ ಕಳೆಯುತ್ತಾರೆ. ಪನ್ವೇಲ್ ಫಾರ್ಮ್ ಹೌಸ್ ಪಕ್ಕದಲ್ಲಿ ಕೇತನ್ ಕಕ್ಕಡ್ ಎಂಬುವವರು ಆಸ್ತಿ ಹೊಂದಿದ್ದಾರೆ.ಕೇತನ್ ಹಾಗೂ ಸಲ್ಮಾನ್ ಖಾನ್ ಗೂ ಕೆಲ ವಿಚಾರದಲ್ಲಿ ಜಗಳವಾಗಿದೆ. ಈ ವೇಳೆ ಕೇತನ್ ಧರ್ಮದ ವಿಚಾರವಾಗಿ ಮಾತನಾಡಿದ್ದು ಇದರಿಂದ ಸಲ್ಮಾನ್ ಕೋಪಗೊಂಡಿದ್ದಾರೆ.
ಕೆಲವೊಂದು ಯುಟ್ಯೂಬ್ ಚಾಲನ್ ಗಳಲ್ಲಿ ಕೇತಕ್ ಸಲ್ಮಾನ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದನ್ನ ಗಂಭೀರವಾಗಿ ಪರಿಗಣಿಸಿದ ಸಲ್ಮಾನ್ ಕೋರ್ಟ್ ಮೊರೆ ಹೋಗಿದ್ದಾರೆ. ಆಸ್ತಿ ಜಗಳದಲ್ಲಿ ನನ್ನ ವೈಯಕ್ತಿಕ ಘನತೆಗೆ ಧಕ್ಕೆ ಉಂಟು ಮಾಡುತ್ತಿದ್ದೀರಿ. ನನ್ನ ಧರ್ಮವನ್ನ ಯಾಕೆ ಎಳೆದು ತರುತ್ತಿದ್ದೀರಿ? ನನ್ನ ತಂದೆ ಮುಸ್ಲಿಂ, ತಾಯಿ ಹಿಂದೂ. ನಾವೂ ಎಲ್ಲಾ ಹಬ್ಬವನ್ನ ಆಚರಣೆ ಮಾಡುತ್ತೇವೆ ಎಂದು ಸಲ್ಮಾನ್ ಗುಡುಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಇರುವ ಮಾನಹಾನಿಕರ ಮಾಹಿತಿಯನ್ನು ತೆಗೆದು ಹಾಕಲು ಸೂಚನೆ ನೀಡಬೇಕು ಎಂದು ಸಲ್ಲು ಬಾಯ್ ಕೋರ್ಟ್ ಗೆ ಮನವಿ ಮಾಡಿದ್ದಾರೆ.



