
ಕೊಡಗು : ಪುರೋಹಿತರೊಬ್ಬರನ್ನು ಹನಿಟ್ರ್ಯಾಪ್ ಮಾಡಿ 49 ಲಕ್ಷ ರೂ. ವಸೂಲಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಮೂಲದ ದಂಪತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸೋಮವಾರಪೇಟೆ ತಾಲೂಕು ಶನಿವಾರಸಂತೆ ಹೋಬಳಿಯ ಮೈಲಾಪುರ ನಿವಾಸಿ, ಎಂ.ಎನ್. ಭವ್ಯ(30) ಮತ್ತು ಆಕೆಯ ಪತಿ ಹಾಸನ ಜಿಲ್ಲೆ ಅರಕಲಗೋಡುವಿನ ಸುಭಾಷ್ ನಗರ ನಿವಾಸಿ ಪ್ರಸ್ತುತ ಮಂಗಳೂರಿನ ಮೇರಿಹಿಲ್ ವ್ಯೂನಲ್ಲಿ ವಾಸವಿದ್ದ ಕುಮಾರ್ ಅಲಿಯಾಸ್ ರಾಜು(35) ಎಂಬುವವರೇ ಬಂಧಿತ ದಂಪತಿಯಾಗಿದ್ದಾರೆ.
ಆರೋಪಿ ದಂಪತಿ ಚಿಕ್ಕಮಗಳೂರು ಮೂಲದ ಪುರೋಹಿತರೊಬ್ಬರನ್ನು ಹನಿಟ್ರ್ಯಾಪ್ ಮಾಡಿ 49 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದರು. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಮಂಗಳೂರು ಸಿಟಿ ಕ್ರೈಂ ಬ್ರಾಂಚ್(ಸಿಸಿಬಿ) ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದ್ದು, ದಂಪತಿ ಇದೇ ರೀತಿ ಹಲವರಿಗೆ ವಂಚಿಸಿರುವ ಶಂಕೆ ವ್ಯಕ್ತವಾಗಿದೆ.



