Latestಮನರಂಜನೆಸಿನಿಮಾಸೆಲೆಬ್ರಿಟಿ

ಸ್ಯಾಂಡಲ್ ವುಡ್ ಯುವರಾಜನಿಗೆ ಹುಟ್ಟುಹಬ್ಬದ ಸಂಭ್ರಮ

ಸ್ಯಾಂಡಲ್ ವುಡ್ ಯುವರಾಜ ನಟ ನಿಖಿಲ್ ಕುಮಾರಸ್ವಾಮಿಗೆ ಬರ್ತಡೇ ಸಂಭ್ರಮ. ಸಿನಿಮಾ ರಂಗ ಹಾಗೂ ರಾಜಕೀಯದಲ್ಲಿ ಬ್ಯುಸಿಯಾಗಿರೋ ನಿಖಿಲ್ ಗೆ ರಾಜಕೀಯ ನಾಯಕರು ಹಾಗೂ ಚಿತ್ರರಂಗದವರು ಶುಭಾಶಯ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಿಖಿಲ್ ಫೋಟೋ ಪೋಸ್ಟ್ ಮಾಡಿ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಜೊತೆಗೆ ಚಿತ್ರರಂಗದ ಸಾಕಷ್ಟು ಕಲಾವಿದರು ನಿಖಿಲ್ ಗೆ ಶುಭ ಹಾರೈಸಿದ್ದಾರೆ.

ನಟ ನಿಖಿಲ್ ಕುಮಾರಸ್ವಾಮಿ 32ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಳೆದ ವರ್ಷ ನಿಖಿಲ್ ಹಾಗೂ ರೇವತಿ ದಂಪತಿಗಳಿಗೆ ಮಗು ಜನಿಸಿದ್ದು ಮಗು ಹುಟ್ಟಿದ ಬಳಿಕ ನಿಖಿಲ್ ರ ಮೊದಲ ಹುಟ್ಟುಹಬ್ಬವಿದು, ಹಾಗಾಗಿ ನಿಖಿಲ್ ಗೆ  ಸ್ಪೆಷಲ್ ಬರ್ತಡೇ.

ವಿಶ್ವದ್ಯಾಂತ ಕೋವಿಡ್ ಹಾಗೂ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.ಇಂತಹ ಸಂದರ್ಭದಲ್ಲಿ ಜನರು ಹೆಚ್ಚು ಸೇರಿದರೆ ಕೋವಿಡ್ ಮತ್ತಷ್ಟು ಹೆಚ್ಚಾಗುವ ಸಂಭವ ಇದೆ. ಹೀಗಾಗಿ ಅಭಿಮಾನಿಗಳ ಜೊತೆ ಬರ್ತಡೇ ಆಚರಿಸಿಕೊಳ್ಳುವುದಿಲ್ಲವೆಂದು ನಿಖಿಲ್ ಹೇಳಿದ್ದರು, ಇದೇ ಕಾರಣಕ್ಕೆ ಕೇವಲ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿಖಿಲ್ ಕುಮಾರಸ್ವಾಮಿ ಮುಂದಾಗಿದ್ದಾರೆ.

ರೈಡರ್ ಚಿತ್ರದ ಬಳಿಕ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಮಂಜು ಅಥರ್ವ ನಿರ್ದೇಶನದ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದು ಚಿತ್ರದ ಟೈಟಲ್ ಇನ್ನೂ ರಿವೀಲ್ ಆಗಿಲ್ಲ. ಯಶ್ ನಟನೆಯ ಮಾಸ್ಟರ್ ಪೀಸ್, ಶಿವರಾಜ್ ಕುಮಾರ್ ನಟನೆಯ ಮಫ್ತಿ ಚಿತ್ರಕ್ಕೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಮಂಜು ಅಥರ್ವ ನಿಖಿಲ್ ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದುಕೊಂಡಿದ್ದಾರೆ. ಯುವರಾಜನ ಹುಟ್ಟುಹಬ್ಬದ ಪ್ರಯುಕ್ತ ಇಂದು ಚಿತ್ರದ ಪೋಸ್ಟರ್ ರಿಲೀಸ್ ಆಗಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button