Latestವಿಶೇಷಸ್ಪೆಷಲ್ ಸ್ಟೋರೀಸ್

ಕವರ್ ಮೇಲೆ ದೇವರ ಚಿತ್ರ: ಕ್ಷಮೆ ಯಾಚಿಸಿದ ಕಿಟ್ ಕ್ಯಾಟ್

ನೆಸ್ಲೆ ಕಂಪೆನಿಯ ಪ್ರಸಿದ್ಧ ಉತ್ಪನ್ನಗಳಲ್ಲಿ ಒಂದಾದ ಕಿಟ್ ಕ್ಯಾಟ್ ನಿಮಗೆ ಗೊತ್ತೆ ಇದೆ. ತನ್ನ ಉತ್ಪನ್ನವನ್ನ ಮಾರುಕಟ್ಟೆಯಲ್ಲಿ ಇನ್ನಷ್ಟು ಹೆಚ್ಚಿಸಿಕೊಳ್ಳೊಕೆ ಹೋಗಿ ವ್ಯಾಪಕ ವಿರೋಧಕ್ಕೆ ಗುರಿಯಾಗಿದೆ. ಹೀಗಾಗಿ ತನ್ನ ಹೊಸ ಐಡಿಯಾವನ್ನ ಕಂಪೆನಿ ಹಿಂಪಡೆದುಕೊಂಡಿದೆ.

ಎಫ್​ಎಂಜಿಸಿ ಕಂಪೆನಿಯು ಪ್ರಚಾರದ ಗಿಮಿಕ್​ಗಾಗಿ ಕಿಟ್ ಕ್ಯಾಟ್ ಚಾಕಲೇಟ್ ಪ್ಯಾಕ್ ಮೇಲೆ ಭಗವಾನ್ ಜಗನ್ನಾಥ, ಬಲಭದ್ರೆ ಹಾಗೂ ಸುಭದ್ರರ ಚಿತ್ರಗಳನ್ನ ಹಾಕಿಸಿತ್ತು. ಇದು ಸೋಷಿಯಲ್ ಮೀಡಿಯಾದಲ್ಲಿ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿತ್ತು. ಕಿಟ್ ಕ್ಯಾಟ್ ಪ್ಯಾಕ್ ಮೇಲೆ ಪವಿತ್ರ ಚಿತ್ರಗಳನ್ನು ಬಳಸುವ ಮೂಲಕ ಕಂಪೆನಿಯು ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದಿದೆ ಎಂದು ಆರೋಪಿಸಲಾಗಿತ್ತು.

ಟ್ವಿಟರ್ ಬಳಕೆದಾರರೊಬ್ಬರು ದಯಮಾಡಿ ಕಿಟ್ ಕ್ಯಾಟ್ ಪ್ಯಾಕ್ ಮೇಲಿರುವ ಜಗನ್ನಾಥ, ಬಲಭದ್ರೆ ಹಾಗೂ ಸುಭದ್ರರ ಚಿತ್ರಗಳನ್ನ ತೆಗೆದು ಹಾಕಬೇಕು. ಪ್ರತಿಯೊಬ್ಬರು ಚಾಕಲೇಟ್ ತಿಂದು ಬಳಿಕ ಕವರ್ ಅನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಕೆಲವರು ರಸ್ತೆಗಳ ಮೇಲೆ ಬಿಸಾಡುತ್ತಾರೆ. ಹೀಗಾಗಿ ಪೋಟೋಗಳನ್ನ ದಯವಿಟ್ಟು ತೆಗೆದು ಹಾಕಿ ಎಂದು ಮನವಿ ಮಾಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ಕೇಳಿ ಬರ್ತಿದ್ದಂಗೆ ಎಫ್ಎಂಸಿಜಿ ಕ್ಷಮೆಯಾಸಿಚಿಸಿದೆ ಹಾಗೂ ಜನರ ಭಾವನೆಗಳಿಗೆ ದಕ್ಕೆ ತರುವ ವಿಚಾರ ನಮ್ಮದಾಗಿರಲಿಲ್ಲ ಎಂದು ಹೇಳಿಕೆ ನೀಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button