
ಪಾಕಿಸ್ತಾನ: ಲಾಹೋರ್ ನ ಅನಾರ್ಕಲಿ ಮಾರುಕಟ್ಟೆ ಆವರಣದಲ್ಲಿ ಭೀಕರ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.
ಭಾರತದ ಅತ್ತಾರಿ ಬಾರ್ಡರ್ ನಿಂದ ಕೇವಲ 28 ಕಿಮೀ ಅಂತರದಲ್ಲಿ ಈ ದುರಂತ ಸಂಭವಿಸಿದ್ದರಿಂದ ಆತಂಕ ಸೃಷ್ಟಿಸಿದೆ. ಸ್ಫೋಟದ ತೀವ್ರತೆಗೆ ಸುತ್ತಲಿನ ಮನೆ ಹಾಗೂ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.



