ಕೊಡಗುಜಿಲ್ಲಾ ಸುದ್ದಿ

ಮಡಿಕೇರಿಯಲ್ಲಿ ಮೂವರು ಕೋವಿಡ್ ಸೋಂಕಿತರು ಎಸ್ಕೇಪ್

ಮಡಿಕೇರಿ : ನಗರದ ಗಾಂಧಿ ಮೈದಾನದ ಬಳಿಯ ರೆಡ್ಡಿ ಕಟ್ಟಡದ ಕಾಂಪ್ಲೆಕ್ಸ್ ನಿಂದ ಮೂವರು ಕೋವಿಡ್ ಸೋಂಕಿತರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ.

ಸುಶೀಲ್ (24), ಶಾಂಬು ಉರವನ್ (25), ಫಂಟು (19) ಪರಾರಿಯಾದ ಕಾರ್ಮಿಕರು. ಇವರು ಜಾರ್ಖಂಡ್ ಮೂಲದ ನಿವಾಸಿಗಳಾಗಿದ್ದಾರೆ.

ನಗರದ ಗಾಂದೀ ಮೈದಾನದ ಬಳಿ ನಿರ್ಮಾಣ ಹಂತದಲ್ಲಿರುವ ರೆಡ್ಡಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಕಟ್ಟಡದ 59 ಕಾರ್ಮಿಕರಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿತ್ತು.

ಸೋಂಕಿತ ಕಾರ್ಮಿಕರಿಗೆ ಕಟ್ಟಡದ ನೆಲಮಹಡಿಯಲ್ಲೇ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಆದರೇ ರೆಡ್ಡಿ ಕಟ್ಟಡದಿಂದ ಇಂದು ಬೆಳಗಿನ ಜಾವ ಮೂವರು ಕಾರ್ಮಿಕರು ನಾಪತ್ತೆಯಾಗಿದ್ದಾರೆ.

ಅಷ್ಟೇ ಅಲ್ಲದೇ ಸೋಂಕಿತರ ಜೊತೆಗಿದ್ದ 7 ಮಂದಿ ಪ್ರಾಥಮಿಕ ಸಂಪರ್ಕಿತರೂ ಎಸ್ಕೇಪ್ ಆಗಿರುವುದಾಗಿ ತಿಳಿದು ಬಂದಿದೆ.

ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಾರಿಯಾದ ಕಾರ್ಮಿಕರ ಕುರಿತು ಮಾಹಿತಿ ಸಂಗ್ರಹ ಮಾಡಿದ್ದಾರೆ. ಸೋಂಕಿತ ಕಾರ್ಮಿಕರ ಪತ್ತೆ ಕಾರ್ಯ ಆರಂಭವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button