Latestಮನರಂಜನೆಸಿನಿಮಾ

ಇಂದು ದುನಿಯಾ ವಿಜಯ್ ಗೆ ಹುಟ್ಟುಹಬ್ಬದ ಸಂಭ್ರಮ

ನಟ ದುನಿಯಾ ವಿಜಯ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.ಚಂದನವನದಲ್ಲಿ ದುನಿಯಾ ಸಿನಿಮಾದ ಮೂಲಕ ಸಖತ್ ಫೇಮಸ್ ಆಗಿದ್ದರು. ನಂತರ ಕಳೆದ ವರ್ಷ ಸಲಗ ಸಿನಿಮಾದಲ್ಲಿ ಅವರೆ ನಿರ್ದೇಶನ ಮಾಡಿ ನಟನೆಯೂ ಸಹ ಮಾಡಿದ್ದಾರೆ.

ಇದೀಗ ಇಂದು ಅವರ ಹುಟ್ಟುಹಬ್ಬದವಾಗಿದ್ದರಿಂದ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಈ ಬಾರಿಯೂ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಣಯ ಕೈಗೊಂಡಿದ್ದಾರೆ.ಈ ಕುರಿತು ವಿಜಯ್ ಅವರು ಪತ್ರ ಬರೆದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಸ್ಯಾಂಡಲ್​ವುಡ್​ನ ಖ್ಯಾತ ನಟ ಪುನೀತ್​ ರಾಜ್​ಕುಮಾರ್​ ಮೃತಪಟ್ಟಿದ್ದಾರೆ. ಇದು ಇಡೀ ಚಿತ್ರರಂಗಕ್ಕೆ ನೋವು ತಂದಿದೆ. ದುನಿಯಾ ವಿಜಯ್​ ಅವರಿಗೂ ಈ ವಿಚಾರ ದುಃಖ ನೀಡಿದೆ. ಕಳೆದ ವರ್ಷ ದುನಿಯಾ ವಿಜಯ್​ ಅವರ ತಂದೆ, ತಾಯಿ ಇಬ್ಬರೂ ಮೃತಪಟ್ಟರು.

ಹೀಗಾಗಿ ಇಬ್ಬರನ್ನೂ ಒಂದೇ ವರ್ಷ ಕಳೆದುಕೊಂಡಿದ್ದು ಅವರಿಗೆ ಸಾಕಷ್ಟು ನೋವು ತಂದಿದೆ. ಈ ಮೂರು ಪ್ರಮುಖ ಕಾರಣಕ್ಕೆ ವಿಜಯ್ ಅವರು ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ.

ಸದ್ಯ ಬಾಲಯ್ಯ 107ನೇ ಚಿತ್ರಕ್ಕೆ ದುನಿಯಾ ವಿಜಯ್​ ವಿಲನ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button