ಕೊಡಗು

ಲಂಚಕ್ಕೆ ಬೇಡಿಕೆಯಿಟ್ಟು ಎಸಿಬಿ ಬಲೆಗೆ ಬಿದ್ದ ಶಿರಸ್ತೇದಾರ್

ಕೊಡಗು : ಕಡತ ವಿಲೇವಾರಿಗೆ ಸಂಬಂಧಿಸಿದಂತೆ 14 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟು ಕುಶಾಲನಗರದ ಶಿರಸ್ತೆದಾರರೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕುಶಾಲನಗರದ ಶಿರಸ್ತೇದಾರ್ ಡಿ ಟಿ ವಿನೋದ್ ಅವರು ಅಂದಗೋವೆಯ ನಿವಾಸಿ ಬೆಳ್ಯಪ್ಪ ಎಂಬುವವರ ಬಳಿ ಕಡತ ವಿಲೇವಾರಿಗಾಗಿ 14 ಲಕ್ಷ ರೂಪಾಯಿಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಕುರಿತು ಬೆಳ್ಯಪ್ಪ ಎಸಿಬಿ ಗೆ ದೂರು ನೀಡಿದ್ದರು. ದೂರಿನ್ವಯ ಎಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

ಇಂದು ಕುಶಾಲನಗರದ ತಾಲ್ಲೂಕು ಕಚೇರಿಯ ಕ್ಯಾಂಟೀನ್ ನಲ್ಲಿ ಶಿರಸ್ತೇದಾರ್ ಡಿ.ಟಿ ವಿನೋದ್ ಬೆಳ್ಯಪ್ಪ ಅವರ ಬಳಿ 1 ಲಕ್ಷ ರೂಪಾಯಿಗಳ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ

Spread the love

Related Articles

Leave a Reply

Your email address will not be published. Required fields are marked *

Back to top button