Latestರಾಷ್ಟ್ರೀಯವಿದೇಶಸುದ್ದಿಸ್ಪೆಷಲ್ ಸ್ಟೋರೀಸ್

ಗೂಗಲ್ ಮೀಟ್​ನಲ್ಲಿ ಮದುವೆ, ಝೊಮ್ಯಾಟೊ ಮೂಲಕ ಊಟ

ಕೊರೊನಾ ಅನ್ನೋ ಮಹಾಮಾರಿಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಪ್ರತಿಯೊಂದು ವರ್ಗದವ್ರು ಈ ವೈರಾಣುವಿನಿಂದ ಕಂಗಾಲಾಗಿದ್ದಾರೆ. ಹೊಸ ಜೀವನ ರೂಪಿಸಿಕೊಳ್ಳಬೇಕು ಎಂದು ಕನಸು ಕಟ್ಟಿಕೊಂಡಿದ್ದ ಅದೆಷ್ಟೋ ಜೋಡಿಯ ಮದುವೆಯನ್ನ ಈ ಕೊರೊನಾ ಕೆಲ ವರ್ಷಗಳ ಕಾಲ ಮುಂದೂಡಿದೆ. ಆದ್ರೆ ಇಲ್ಲೊಂದು ಜೋಡಿ ಕೊರೊನಾ ಹೆಚ್ಚುತ್ತಿರುವುದರ ಮದ್ಯೆಯೂ ಅದ್ದೂರಿಯಾಗಿ ಸತಿ ಪತಿಗಳಾಗೋ ನಿರ್ಧರ ಮಾಡಿದೆ.

ಕೋವಿಡ್ ಕಾರಣದಿಂದ ಕಾರ್ಯಕ್ರಮಗಳಿಗೆ ಹೆಚ್ಚಿನ ಜನರಿಗೆ ಆಹ್ವಾನ ನೀಡಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಸಾವಿರಾರು ಜನರ ಮುಂದೆ ಅದ್ದೂರಿಯಾಗಿ ಸತಿ ಪತಿಗಳಾಗ ಬೇಕು ಎಂದು ಬಯಸಿದ್ದು ಅದೆಷ್ಟೋ ಜೋಡಿಗಳಿಗೆ ಬೇಸರವಾಗಿದೆ. ವಿಧಿ ಇಲ್ಲದೆ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ನವ ಜೋಡಿಗಳು ಹೊಸ ಬಾಳಿಗೆ ಅಡಿ ಇಡುತ್ತಿದ್ದಾರೆ. ಇಷ್ಟೆಲ್ಲಾ ಇದ್ರು ಈ ಜೋಡಿ ಮಾತ್ರ ಅದ್ದೂರಿಯಾಗಿ ಮದುವೆಯಾಗ್ತಿದೆ. ಅಷ್ಟೇ ಅಲ್ಲ ಭರ್ಜರಿ ಭೋಜನವನ್ನು ಹಾಕಿಸ್ತಿದೆ.

ಸಂದೀಪನ್ ಹಾಗೂ ಅಧಿತಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕೊರೊನಾ ಹಿನ್ನೆಲೆ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ 200 ಜನರ ಮಿತಿಯನ್ನ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದೇ ಜನವರಿ 24ರಂದು ಈ ಜೋಡಿಗಳು ಹಸೆ ಮಣೆ ಏರ್ತಿದ್ದಾರೆ. ಅಷ್ಟೂ ಸಂಬಂಧಿಕರ ಮುಂದೆ ಅದ್ದೂರಿಯಾಗಿ ಮದುವೆಯಾಗ್ಬೇಕು, ಭರ್ಜರಿ ಊಟ ಹಾಕಿಸ್ಬೇಕು ಎಂದು ಕನಸು ಕಂಡಿದ್ದ ಜೋಡಿ ತಮ್ಮ ಕನಸನ್ನ ಗೂಗಲ್ ಮೀಟ್ ಹಾಗೂ ಝೊಮ್ಯಾಟೊದಲ್ಲಿ ನನಸು ಮಾಡಿಕೊಳ್ತಿದೆ.

ಸಾಂದರ್ಭಿಕ ಚಿತ್ರ

ಕಳೆದ ವರ್ಷವೇ ಸಂದೀಪನ್ ಹಾಗೂ ಅಧಿತಿ ಮದುವೆಯಾಗಲು ನಿರ್ಧರಿಸಿದ್ದರು. ಆದ್ರೆ ಕೊರೊನಾ ಕಾರಣದಿಂದ ಅವರ ಮದುವೆಯನ್ನ ಮೂಂದೂಡಲಾಗಿತ್ತು. ಆದ್ರೆ ಈ ಭಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಕಾಣಿಸಿಕೊಳ್ತಿದ್ದು ಈ ಕಾರಣಕ್ಕೆ ವರ್ಚುವಲ್ ಮೂಲಕ ಮದುವೆಯಾಗಲು ನಿರ್ಧರಿಸಿದ್ದಾರೆ.

ಮದುವೆಗೆ 450 ಜನರಿಗೆ ಗೂಗಲ್ ಮೀಟ್ ಲಿಂಕ್ ಅನ್ನು ಕಳುಹಿಸಿಕೊಡಲಾಗಿದ್ದು, ಅಲ್ಲದೆ ಝೋಮ್ಯಾಟೋ ಮೂಲಕ ಸಂಬಂಧಿಕರ ಮನೆಗಳಿಗೆ ಊಟವನ್ನ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ.

ಮದುವೆಯನ್ನ ಗೂಗಲ್ ಮೀಟ್​ನಲ್ಲಿ ಪ್ರಸಾರ ಮಾಡಲು ಟೆಕ್ನಿಕಲ್ ಟೀಮ್ ನೇಮಿಸಿದ್ದಾರಂತೆ ಸಂದೀಪನ್ ಹಾಗೂ ಅಧಿತಿ ಜೋಡಿ.

Related Articles

Leave a Reply

Your email address will not be published. Required fields are marked *

Back to top button