Breaking NewsLatestಆರೋಗ್ಯಜಿಲ್ಲಾ ಸುದ್ದಿಮೈಸೂರುಲೈಫ್ ಸ್ಟೈಲ್

Medicine: ಸ್ತನ ಕ್ಯಾನ್ಸರ್ ಗೆ ಹೊಸ ಔಷಧಿ ಕಂಡುಹಿಡಿದ ಮೈಸೂರು ವಿವಿ ಪ್ರಾಧ್ಯಾಪಕ ಡಾ. ಬಸಪ್ಪ

ಮೈಸೂರು : ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸ್ತನ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಆದ್ರೆ ಈಗ ಮೈಸೂರು ವಿಶ್ವವಿದ್ಯಾನಿಲಯದ ಸಾವಯವ ರಸಾಯನಶಾಸ್ತ್ರದ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಬಸಪ್ಪ ಅವರು ಸ್ತನ ಕ್ಯಾನ್ಸರ್ ಗೆ ಹೊಸ ಔಷಧಿಯನ್ನು ಆವಿಷ್ಕಾರ ಮಾಡಿದ್ದಾರೆ.

ಡಾ.ಬಸಪ್ಪ ಅವರು ಹೊಸ ಔಷಧಿಯನ್ನು(ಡ್ರಗ್ ಲೈಕ್ ಕಾಂಪೌಂಡ್) ಅಭಿವೃದ್ಧಿ ಪಡಿಸಿದ್ದಾರೆ. ಸ್ತನ ಕ್ಯಾನ್ಸರ್‌ನಿಂದ ವಿಶ್ವದಾದ್ಯಂತ ಸಾವಿನ ಸಂಖ್ಯೆ 10 ದಶಲಕ್ಷಕ್ಕೆ ತಲುಪಿದೆ. ಈ ಭಯಾನಕ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ 19 ದಶಲಕ್ಷದ ಗಡಿ ದಾಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಜ್ಞರು ಬಹಿರಂಗಪಡಿಸಿದ್ದಾರೆ.

ಈ ಕಾಯಿಲೆಗೆ ಬಳಕೆಯಲ್ಲಿರುವ ಪ್ರಸ್ತುತ ಚಿಕಿತ್ಸೆಯ ವಿಧಾನಗಳೆಂದರೆ ಶಸ್ತ್ರಚಿಕಿತ್ಸೆ (ಮ್ಯಾಸ್ಟೆಕ್ಟಮಿ), ಕಿಮೋಥೆರಪಿ, ವಿಕಿರಣ ಮತ್ತು ಹಾರ್ಮೋನ್ ಥೆರಪಿ. ಹಾಗಾಗಿ ಡಾ. ಬಸಪ್ಪ ಅವರು ಹಲವು ವರ್ಷಗಳಿಂದ ತಮ್ಮ ಪ್ರಯೋಗಲಾದಲ್ಲಿ ಪ್ರಯೋಗ ನಡೆಸಿ ಆಕ್ಸಾಡಿಯಾ ಜೋಲ್ ಆಧಾರಿತ ಪಿಎಆರ್​ಪಿ ಎಂಬ ಪ್ರತಿಬಂಧಕವನ್ನ ಅಭಿವೃದ್ಧಿ ಪಡಿಸಿದ್ದಾರೆ.

ಡಾ. ಬಸಪ್ಪ

ಇದು ಸ್ತನ ಕ್ಯಾನ್ಸರ್​ಗೆ ಪ್ರಸ್ತುತದಲ್ಲಿ ಇರುವ ಒಲಾಪರಿಬ್ ಔಷಧಿಗಿಂತ ಎರಡು ಪಟ್ಟು ಅಧಿಕ ಪರಿಣಾಮಕಾರಿಯಾಗಿದೆ ಎಂದು ಸಂಶೋಧನೆಯಲ್ಲಿ ಸಾಬೀತಾಗಿದೆ‌ ಎಂದು ಡಾ. ಬಸಪ್ಪ ಅವರು ತಿಳಿಸಿದ್ದಾರೆ.

ಚೀನಾದ ಶಿಂಗ್ಹಾವ್ ಬರ್ಕಿ ಶೆನೈನ್ ಇನ್ಸ್ಟಿಟ್ಯೂಟ್ ನ ಪ್ರೊ. ಪೀಟರ್ ಇ ಲೋಬಿ ಅವರ ಸಹಯೋಗದಲ್ಲಿ ಮತ್ತು ಮೈಸೂರು ವಿವಿ‌ಯ ಪ್ರಯೋಗಾಲದಲ್ಲಿ ಈ ಸಂಶೋಧನೆಯನ್ನು ಪ್ರಯೋಗ ಮಾಡಿದ್ದೇವೆ.

ಇದು ಸ್ತನ ಕ್ಯಾನ್ಸರ್​ಗೆ ಹೊಸ ಔಷಧವಾಗಿದ್ದು, ಅದರ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿರುವ ರೋಗಿಗಳಿಗೆ ಹೊಸ ಭರವಸೆ ಮೂಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button