ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲ್ಲಿ ಹೊಸದಾಗಿ 2.38 ಲಕ್ಷ ಹೊಸ ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈ ನಡುವೆ ಒಮಿಕ್ರಾನ್ ದೇಶದ 29 ರಾಜ್ಯಗಳಿಗೆ ವ್ಯಾಪಿಸಿಕೊಂಡಿದೆ, ದೇಶದಲ್ಲಿ ಈವರೆಗೆ 8, 891 ಒಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದೆ
ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಚಿಕಿತ್ಸೆ ಫಲಕಾರಿಯಾಗದೆ 310 ಜನ ಮೃತಪಟ್ಟಿದ್ದಾರೆ. ಮಾರಕ ಸೋಂಕಿಗೆ 4. 86 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಇಲಾಖೆಯ ವರದಿ ಹೇಳಿದೆ. ದಿನದ ಪಾಸಿಟಿವಿಟಿ ದರ 14.43 ಕ್ಕೆ ಏರಿಕೆಯಾಗಿದೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 17 ಲಕ್ಷಕ್ಕೂ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿ ಹೇಳಿದೆ.
ಕಳೆದ 24 ಗಂಟೆಗಳಲ್ಲಿ 1. 57 ಲಕ್ಷ ಜನರು ಚೇತರಿಸಿಕೊಂಡಿದ್ದು ಈವರೆಗೆ ದೇಶಾದ್ಯಂತ ಸೋಂಕಿನಿಂದ 3. 53 ಕೋಟಿ ಜನರು ಚೇತರಿಸಿಕೊಂಡಿದ್ದಾರೆ.
