ಟಿವಿಮನರಂಜನೆ

ವೀಕೆಂಡ್ ಕರ್ಫ್ಯೂ ಉಲ್ಲಂಘನೆ: ಕಿರುತೆರೆ ಚಿತ್ರೀಕರಣ ಸ್ಥಗಿತ

ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ನೈಟ್ ಕರ್ಫ್ಯೂ ಜೊತೆ ವೀಕೆಂಡ್ ಕರ್ಫ್ಯೂ ವಿಧಿಸಿದೆ.

ಶುಕ್ರವಾರ ರಾತ್ರಿಯಿಂದ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿತ್ತು. ಈ ವೇಳೆ ಕಿರುತೆರೆ ತಂಡವೊಂದು ರಾಜಾರೋಷವಾಗಿ ಧಾರಾವಾಹಿ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ಫಲ್ಗುಣಿ ಗ್ರಾಮದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಹೋಟೆಲ್ ನಲ್ಲಿ ಸೀರಿಯಲ್ ತಂಡ ಶೂಟಿಂಗ್ ನಡೆಸಿತ್ತು. ಕಾಫಿ ಕಾರ್ನರ್ ಕೆಫೆಯಲ್ಲಿ ಶೂಟಿಂಗ್ ನಡೆಸುತ್ತಿದ್ದರು.

ಈ ವೇಳೆ ಪೊಲೀಸರಿಗೆ ಮಾಹಿತಿ ತಿಳಿದುಬಂದಿದೆ. ಈ ಮಾಹಿತಿ ಮೇರೆಗೆ ಬಣಕಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ, ಹೋಟೆಲ್ ಮಾಲೀಕನಿಗೆ 1000 ರೂ. ಹಾಗೂ ಶೂಟಿಂಗ್ ತಂಡಕ್ಕೆ 6500 ರೂ. ದಂಡ ವಿಧಿಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button