Breaking NewsLatestಜಿಲ್ಲಾ ಸುದ್ದಿಸುದ್ದಿಹುಬ್ಬಳ್ಳಿ - ಧಾರವಾಡ

ವೀಕೆಂಡ್‌ ಕರ್ಪ್ಯೂ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಗರ ಪ್ರದಕ್ಷಿಣೆ

City Rounds : ಧಾರವಾಡ: ಒಮೈಕ್ರಾನ್ ಮತ್ತು ಕೊರೋನಾ ನಿಯಂತ್ರಣಕ್ಕಾಗಿ ಜಾರಿ ಮಾಡಲಾಗಿರುವ ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಭಾನುವಾರ ಹುಬ್ಬಳ್ಳಿ-ಧಾರವಾಡ ಪೋಲಿಸ್ ಆಯುಕ್ತ ಲಾಬೂರಾಮ್ ನಗರ ಪ್ರದಕ್ಷಿಣೆ ನಡೆಸಿದರು. ಚನ್ನಮ್ಮ ವೃತ್ತದಲ್ಲಿ ಪೋಲಿಸ್ ಬಿಗಿ ಭದ್ರತೆ ಪರಿಶೀಲನೆ ನಡೆಸಿದ ಅವರು, ಪೋಲಿಸರಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿದರು. ಕೋವಿಡ್ ದೃಢಪಟ್ಟ ಪೊಲೀಸ ಸಿಬ್ಬಂದಿಗಳಿಗೆ  ಸೂಕ್ತ ಸಲಹೆ, ಧೈರ್ಯ ತುಂಬಲಾಗುತ್ತಿದೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೋಲಿಸ್ ಕಮಿಷ್ನರೇಟ್ ವ್ಯಾಪ್ತಿಯಲ್ಲಿ ಈವರೆಗೆ 150 ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಕೋವಿಡ್-19 ವೈರಸ್ ಪಾಸಿಟಿವ್ ಬಂದಿವೆ. ಈಗಾಗಲೇ ಅಂತಹ ಸಿಬ್ಬಂದಿಗಳನ್ನು ಹೋಂ ಐಸೋಲೇಷನ್‌‌ಲ್ಲಿ‌ ಇರಿಸಲಾಗಿದ್ದು, ಮನೆಯಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಂತಹವರಲ್ಲಿ ಯಾರಿಗಾದರೂ ಮನೆಯಲ್ಲಿ ಚಿಕಿತ್ಸೆ ಪಡೆಯಲು ಆಗದೇ ಇದ್ದಲ್ಲಿ ಅವರಿಗೆ ಶನಿವಾರದಿಂದ ನವನಗರದ ಅಂಬೇಡ್ಕರ್ ಭವನದಲ್ಲಿ 45 ಹಾಸಿಗೆಗಳ ಕೋವಿಡ್ ಸೆಂಟರ್ ಪ್ರಾರಂಭ ಮಾಡಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಕೋವಿಡ್ ದೃಢಪಟ್ಟ ಪೋಲಿಸ್ ಸಿಬ್ಬಂದಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದು, ಎಲ್ಲರ ಆರೋಗ್ಯ ಉತ್ತಮವಾಗಿದೆ‌. ಯಾರ ಆರೋಗ್ಯ ಚಿಂತಾಜನಕವಾಗಿಲ್ಲ. ಚೇತರಿಕೆ ಕಾಣುತ್ತಿದ್ದಾರೆ. ಅವರಿಗೆ ಸೂಕ್ತ ಸಲಹೆ ಮತ್ತು ಧೈರ್ಯ ತುಂಬುವ ಕೆಲಸ ಮಾಡಲಾಗಿದೆ. ಇನ್ನೂ ಮುಂಜಾಗ್ರತಾ ಕ್ರಮವಾಗಿ ಕೋವಿಡ್ ದೃಢಪಟ್ಟ ಪೋಲಿಸ್ ಠಾಣೆಯ ಪೋಲಿಸ್ ಸಿಬ್ಬಂದಿಗಳಿಗೂ ವೇಗವಾಗಿ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button