Breaking NewsLatestಇತರ ಕ್ರೀಡೆಕ್ರೀಡೆಟೆನಿಸ್ರಾಷ್ಟ್ರೀಯವಿದೇಶಸುದ್ದಿಸೆಲೆಬ್ರಿಟಿ

ನೋವಾಕ್ ಜೋಕೋವಿಚ್ ಗೆ ಗೆಲುವು, ಸರ್ಕಾರಕ್ಕೆ ಮುಖಭಂಗ

ಮೆಲ್ಬೊರ್ನ್ : ಆಸ್ಟ್ರೇಲಿಯಾ ಸರ್ಕಾರದ ವಿರುದ್ಧದ ಕಾನೂನು ಸಮರದಲ್ಲಿ ವಿಶ್ವದ ನಂಬರ್ 1 ಟೆನಿಸ್ ಆಟಗಾರ ಸೆರ್ಬಿಯಾದ ಟೆನಿಸ್ ಆಟಗಾರ ನೋವಾಕ್ ಜೋಕೋವಿಚ್ ಗೆ ಗೆಲುವು ದೊರಕಿದೆ. ಅಲ್ಲಿನ ಫೆಡರಲ್ ನ್ಯಾಯಾಲಯ ಜೋಕೋವಿಚ್ ವೀಸಾ ಸಕ್ರಮಗೊಳಿಸಿ ಮತ್ತು ಅವರನ್ನು ಕೂಡಲೇ ಕ್ವಾರಂಟೈನ್ ಕೇಂದ್ರದ ಬಿಡುಗಡೆ ಮಾಡುವಂತೆಯೂ ಆದೇಶಿಸಿದೆ.
ಈ ತೀರ್ಪು ಆಸ್ಟ್ಲೆಲಿಯಾ ಸರ್ಕಾರಕ್ಕೆ ಬಹಳ ದೊಡ್ಡ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ. ಆಸ್ಟ್ರೇಲಿಯಾ ಓಪನ್ ಟೆನ್ಸಿಸ್ ಪಂದ್ಯದಲ್ಲಿ ತೊಡಗಲು ಅವರಿಗೆ ಫೆಡರಲ್ ಕೋರ್ಟ್ ಅವಕಾಶ ನೀಡಿದ್ದು ಅವರ ವೀಸಾವನ್ನು ಮರುಸ್ಥಾಪಿಸುವಂತೆಯೂ ನಿರ್ದೇಶನ ನೀಡಿದೆ.
ಕಳೆದ ಬುಧವಾರ ಅವರು ಮೆಲ್ಬೋರ್ನ್ ಗೆ ಆಗಮಿಸಿದ್ದ ಸಂದರ್ಭದಲ್ಲಿ ಪ್ರವೇಶದ ಅನುಮತಿಗೆ ಬೇಕಾಗಿದ್ದ ರಿಯಾಯಿತಿ ಹೊಂದಿಲ್ಲ ಎಂಬ ಕಾರಣಕ್ಕಾಗಿ ಅವರ ವೀಸಾ ರದ್ದುಗೊಳಿಸಿ ವಶಕ್ಕೆ ತೆಗೆದುಕೊಂಡು ಅವರನ್ನು ನ್ನು ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇಡಲಾಗಿತ್ತು .
ಇದನ್ನು ಪ್ರಶ್ನೆ ಮಾಡಿ ಜೋಕೋವಿಚ್ ನ್ಯಾಯಾಲಯದ ಮೊರೆ ಹೋಗಿದ್ದು ಅಂತಿಮವಾಗಿ ಅವರಿಗೆ ಗೆಲುವಾಗಿದ್ದು ಅಲ್ಲಿನ ಸರಕಾರಕ್ಕೆ ಭಾರಿ ಮುಖಭಂಗವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button