Latestಕಲಬುರ್ಗಿಜಿಲ್ಲಾ ಸುದ್ದಿ
ಕಲಬುರ್ಗಿಯಲ್ಲಿ ಬಾವಿಗೆ ಬಿದ್ದು ಮಕ್ಕಳಿಬ್ಬರ ಸಾವು

ಕಲಬುರಗಿ : ಬಾವಿಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಗೊಬ್ಬರುವಾಡಿ ಗ್ರಾಮದಲ್ಲಿ ನಡೆದಿದೆ.
ಪ್ರಣತಿ (5) ಶಿವಕುಮಾರ್ (3) ಮೃತ ಮಕ್ಕಳು ಎಂದು ಗುರುತಿಸಲಾಗಿದೆ. ಗೊಬ್ಬುರವಾಡಿಯ ನಿವಾಸಿಯಾದ ಶರಣಪ್ಪ ರಟಕಲ್ ಎಂಬುವರ ಮಕ್ಕಳು ಇವರಾಗಿದ್ದಾರೆ.
ಆಟವಾಡುತ್ತ ಬಾವಿಗೆ ಆಯಾತಪ್ಪಿ ಬಿದ್ದಿದ್ದಾರೆ. ವಿಶೇಷ ಚೇತನರಾದ ಮಕ್ಕಳ ತಂದೆ ಶರಣಪ್ಪ ಮಕ್ಕಳನ್ನು ರಕ್ಷಿಸಿಲು ಬಾವಿಗೆ ಜಿಗಿದಿದ್ದಾರೆ. ಆದರೆ, ಕಾಲುಗಳಿಲ್ಲದೆ ವಿಶೇಷ ಚೇತನರಾದ ಶರಣಪ್ಪ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗದೆ ತಾನು ನೀರಿನಲ್ಲಿ ಮುಳುಗುವಾಗ ಸ್ಥಳಿಯರು ರಕ್ಷಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಕಮಲಾಪುರ ಪೊಲೀಸ್ ರು ಭೇಟಿನೀಡಿ ಪರೀಶಿಲನೆ ಮಾಡಿದ್ದಾರೆ. ಈ ಕುರಿತು ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



