Breaking NewsLatestರಾಷ್ಟ್ರೀಯಸುದ್ದಿ

ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಸತ್ತಿನ ನಾನೂರು ಸಿಬ್ಬಂದಿಗೆ ಕೋವಿಡ್

ದೆಹಲಿ: ಚಳಿಗಾಲ ಬಜೆಟ್ ಅಧಿವೇಶನಕ್ಕೂ ಮುನ್ನ 400ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿಗಳಿಗೆ ಕೋವಿಡ್ ದೃಢಪಟ್ಟಿದೆ. ಅಧಿವೇಶನದ ಹಿನ್ನೆಲೆಯಲ್ಲಿ ಕಳೆದ ಜ.4 ರಿಂದ 8 ರವರೆಗೆ ಸಂಸತ್ತಿನ 1,409 ಸಿಬ್ಬಂಧಿಗಳಿ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ 400 ಮಂದಿಗೆ ಪಾಸಿಟಿವ್ ವರದಿ ಬಂದಿದೆ. ಸೋಂಕು ರೂಪಾಂತರಿಯಾಗಿದೆಯೇ ಎಂಬುದರ ಕುರಿತು ತಿಳಿಯಲು ಜೆನೋಮ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಂಸತ್ತಿನ ಉಭಯ ಸದನಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸೋಂಕು ದೃಢಪಟ್ಟ ನಂತರ ಪ್ರತ್ಯೇಕವಾಗಿರಿಸಲಾಗಿದೆ. ಹಲವು ಅಧಿಕಾರಿಗಳನ್ನು ಐಸೋಲೆಟ್ ನಲ್ಲಿಡಲಾಗಿದೆ. ಸಂಸತ್ ನ ಸಿಬ್ಬಂದಿ ಸಮಾರ್ಥ‍್ಯದ ಶೇ.50ರಷ್ಟು ಮಂದಿ ಕೆಲಸ ಮಾಡಲು ಈಗಾಗಲೇ ನಿರ್ದೇಶಿಸಲಾಗಿದೆ. ಉಳಿದವರು ಮನೆಯಿಂದಲೇ ಕಾರ್ಯನಿರ್ವಹಿಸಬಹುದಾಗಿದೆ. 

ಈ ನಡುವೆ ಕೇಂದ್ರ ಸರ್ಕಾರ ಒಮಿಕ್ರಾನ್ ನ ಹೊಸ ರೂಪಾಂತರವನ್ನು ಗಂಭೀರವಾಗಿ ಪರಿಗಣಿಸಿ ತನ್ನ ಸಿಬ್ಬಂದಿ ಕಚೇರಿಯ ಹಾಜರಾತಿಯ  ಬಯೋಮೆಟ್ರಿಕ್ ನಿಂದ ವಿನಾಯಿತಿ ನೀಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button